ಹಕ್ಕಿ ಬಿದ್ದಿತು ನೋಡಿದಿರಾ...

ಹಕ್ಕಿ ಬಿದ್ದಿತು ನೋಡಿದಿರಾ...

ಬರಹ

ಜೀವನದಲ್ಲಿ ಅನೇಕ ಘಟನೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅವುಗಳಲ್ಲಿ ಎಷ್ಟೋ ಘಟನೆಗಳನ್ನು ನಾವು ಸಹಜವಾಗಿ ಮರೆತು ಬಿಟ್ಟಿರುತ್ತೇವೆ. ಏಕೆಂದರೆ
ಅವುಗಳು ಅಷ್ಟು ಮಹತ್ವದ್ದಾಗಿರುವುದಿಲ್ಲ. ಆದರೆ ಅದೇ ರೀತಿ ಜೀವನದಲ್ಲಿ ಜರುಗುವ ಕೆಲವು ವಿಶಿಷ್ಟ ಘಟನೆಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಬೇರೂರಿ
ಬಿಡುತ್ತವೆ. ಎಷ್ಟೋ ವರುಷಗಳಾದರೂ ಅವು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತವೆ. ಅಂತಹ ಅವಿಸ್ಮರಣೀಯ ಘಟನೆಗಳು ನೆನಪಾದಾಗಲೆಲ್ಲ
ಅವು ನಮ್ಮ ಮನಸ್ಸಿಗೆ ಉಲ್ಲಾಸ, ಉತ್ಸಾಹ, ಮುದವನ್ನೂ (ಸಂತೋಷಕರ ಘಟನೆಗಳಾಗಿದ್ದಲ್ಲಿ), ಅದೇ ರೀತಿ ಬೇಸರ, ಖಿನ್ನತೆ ಹಾಗೂ ನಿರುತ್ಸಾಹವನ್ನೂ
(ಅಹಿತಕರ ಅನುಭವಗಳಾಗಿದ್ದಲ್ಲಿ) ಉಂಟು ಮಾಡುವುದೂ ಸಹಜ. ಕೆಲವೊಂದು ಘಟನೆಗಳಂತೂ ನಮಗೆ ಸದಾ ಸ್ಫೂರ್ತಿಯ ಮತ್ತು ಸಂತ್ಋಪ್ತಿಯ ಭಾವನೆಗಳ ಸೆಲೆಯಂತೆಯೇ
ಇರುತ್ತವೆ. ನನ್ನ ನಿಜ ಜೀವನದಲ್ಲಿ ನಡೆದ ಅಂತಹ ಒಂದು ಸಂದರ್ಭವನ್ನು ನಾನಿಲ್ಲಿ ವಿವರಿಸಲು ಪ್ರಯತ್ನಿಸಿದ್ಧೇನೆ.

ಇತ್ತೀಚೆಗೆ ಎಂದಿನಂತೆ ನಾನು ಮನೆಯ ಟೆರೇಸ್ ಮೇಲೆ ಬೆಳಗಿನ ಝಾವ ವಾಕಿಂಗ್ ಮಾಡುತ್ತಿದೆ. ಇನ್ನೇನು ವಾಕಿಂಗ್ ಮುಗಿಸುವ ಸಮಯ. ಆಗ ಬೆಳಿಗ್ಗೆ 6 ಘಂಟೆ
ಇರಬಹುದು. ಸೂರ್ಯನ ಹೊಂಗಿರಣಗಳು ನಿಧಾನವಾಗಿ ಹೊರಬರಲು ತವಕಿಸುತ್ತಿದ್ದ ಸಮಯ. ಥರಾವರಿ ಹಕ್ಕಿಗಳೆಲ್ಲವೂ ಗೂಡುಗಳಿಂದ ಹೊರಟು, ಎಂದಿನ ಸಂಭ್ರಮದಿಂದ
ಸುತ್ತಲೂ ಹಾರಾಡುತ್ತಾ, ಅಲ್ಲಲ್ಲಿ ಕುಳಿತು (ಬಹುಶ: ಅಂದಿನ ಕಾರ್ಯಕ್ರಮ ಏನು ಎಂದು ಪರಾಮರ್ಶಿಸುತ್ತಾ) ಪೂರ್ಣ ಬೆಳಗಾಗುವುದನ್ನು ತಮ್ಮ ಚಿಲಿ-ಪಿಲಿ ಸಂಗೀತದ
ಮೂಲಕ ಸ್ವಾಗತಿಸುತ್ತಿದ್ದ ಸಮಯ. ಮಲೆನಾಡಿನ ಎಂದಿನ ತಂಪಾದ, ಶಾಂತವಾದ ಮತ್ತು ಸೊಬಗಿನ ವಾತಾವರಣ. ನನ್ನ ವಾಕಿಂಗ್ ಪ್ರದಕ್ಷಿಣಾಕಾರವಾಗಿ ಎಂದಿನಂತೆ
ಸಾಗಿತ್ತು. ಟೆರೇಸ್ ಮೇಲಿದ್ದ ಕಟ್ಟಡದ ಪಿಲ್ಲರ್ ಗಳೇ ದೇವರೆಂದುಕೊಂಡು (ಡಾಕ್ಟರ್ ಹೇಳಿದ್ದಾರೆಂದು ಇಷ್ಟೊಂದು ಪ್ರದಕ್ಷಿಣೆ; ಬರೀ ದೇವರಿಗೆ ಎಂದರೆ ಕೇವಲ ಮೂರೇ
ಪ್ರದಕ್ಷಿಣೆ!) ಸಾಗುವ ನನ್ನೀ ವಾಕಿಂಗ್ ನನಗೆ ಒಂದು ರೀತಿಯ 'ಇಂಪೊಸಿಷನ್' ಎಂದರೆ ಹೆಚ್ಚು ಸೂಕ್ತವಾದೀತು!

ಹೀಗೆ ನನ್ನ ವಾಕಿಂಗ್ ಸಾಗಿರುವಾಗ ಇದ್ದಕ್ಕಿದ್ದಂತೆ 'ತೊಪ್' ಎಂಬ ಶಬ್ದ ಕೇಳಿಸಿತು. ನೋಡುತ್ತೇನೆ - ಒಂದು ಚಿಕ್ಕ ಪಕ್ಷಿ - ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾದದ್ದು - ಬಿದ್ದಿದೆ.
ಎರಡು ಕಾಲುಗಳೂ ಆಕಾಶಮುಖಿಯಾಗಿವೆ; ಹಕ್ಕಿ ತೀವ್ರವಾಗಿ ಉಸಿರಾಡುತ್ತಿದೆ; ಕಣ್ಣು ಗಾಭರಿಯಿಂದ ಬಿರಿದಿವೆ. ಬಹುಶ: ಬೇರೆ ಯಾವುದಾದರೂ ದೊಡ್ಡ ಹಕ್ಕಿ ಆಕ್ರಮಣ
ಮಾಡಿ ಇಲ್ಲವೇ ಅನಾರೋಗ್ಯದಿಂದ ದುರ್ಬಲವಾಗಿ ಬಿದ್ದಿರಬಹುದೆಂದು ಊಹಿಸಿದೆ. ಆದರೂ ಒಮ್ಮೆಲೇ ಏನು ಮಾಡಬೇಕೆಂದು ತಿಳಿಯದೆ ಪೇಚಾಡಿದೆ. ಸುತ್ತ ಮುತ್ತ
ನೋಡಿದೆ. ಕ್ಐ-ಕಾಲು ತೊಳೆಯಲು ಅಲ್ಲಿ ಮೂಲೆಯಲ್ಲಿ ಹಾಕಿಸಿದ್ದ ನಲ್ಲಿ ಕಾಣಿಸಿತು. ತಕ್ಸಣ ಅಲ್ಲಿದ್ದ ಟಬ್ ನಿಂದ ನೀರು ಹಿಡಿದು, ನಿಧಾನವಾಗಿ ಆ ಪುಟ್ಟ ಹಕ್ಕಿಯ ಮೇಲೆ
ಚಿಮುಕಿಸಿ, ಸ್ವಲ್ಪ ನೀರನ್ನು ಅದರೆ ಕೊಕ್ಕಿನ ಬಳಿ ತೊಟ್ಟಿಕ್ಕಿಸಿದೆ. ಅದು ತನ್ನ ಕತ್ತನ್ನು ಸ್ವಲ್ಪ ಬದಿಗೆ ತಿರುಗಿಸಿ, ಒಂದು ಹನಿ ನೀರನ್ನು ಕುಡಿದದ್ದು ಕಂಡು ನನಗೆ ಬಹಳ
ಸಮಾಧಾನವೆನಿಸಿತು. ಒಂದ್ಐದು ನಿಮಿಷ ಕಾದೆ. ಆದರೆ ಹಕ್ಕಿ ಅದೇ ರೀತಿ ಮಲಗಿತ್ತು. ಬೇರೆ ಏನೂ ಮಾಡಲು ತೋಚದೆ, ಪೇಯಿಂಟ್ ಮಾಡಲು ಬಳಸುತ್ತಿದ್ದ, ಅಲ್ಲಿದ್ದ
ಒಂದು ಹಳೆಯ ಮಡಿಸುವ ಕುರ್ಚಿಯನ್ನು, ಬೇರೆ ದೊಡ್ಡ ಹಕ್ಕಿಗಳು ಅದನ್ನು ಎತ್ತಿಕೊಂಡು ಹೋಗಬಾರದೆಂದು, ಅದಕ್ಕೆ ಮರೆಯಾಗಿಟ್ಟು ನನ್ನ ಪ್ರದಕ್ಷಿಣೆಯನ್ನು, ಹಕ್ಕಿಯು
ಶೀಘ್ರ ಗುಣಮುಖವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಮುಂದುವರೆಸಿದೆ. ನಾಲ್ಕ್ಐದು ಸುತ್ತಾದ ಮೇಲೆ ಪುನ: ಇನ್ನು ಸ್ವಲ್ಪ ನೀರನ್ನು ಹಕ್ಕಿಯ ಮೇಲೆ ಚಿಮುಕಿಸಿದೆ. ಈ
ಬಾರಿ ಹಕ್ಕಿ ಮ್ಐ ಕೊಡವಿ, ಮಗ್ಗುಲಾಗಿ ತನ್ನ ಕಾಲ ಮೇಲೆ ತಡವರಿಸುತ್ತಾ ನಿಲ್ಲಲು ಮುಂದಾಯಿತು. ನನಗಂತೂ ಬಹಳ ಖುಷಿಯಾಯಿತು. ಪುನ: ಅದನ್ನು ಸಾವರಿಸಿಕೊಳ್ಳಲು
ಬಿಟ್ಟು ನನ್ನ ಸುತ್ತಾಟ (ತಡವಾದ್ದರಿಂದ ಕೆಳಗಿನಿಂದ ನನ್ನ ಹೆಂಡತಿಯ ಕೂಗನ್ನೂ ನಿರ್ಲಕ್ಷಿಸಿ!) ಮುಂದುವರೆಸಿದೆ. ಆದರೆ ನನ್ನ ಕಣ್ಣು ಮತ್ತು ಮನಸ್ಸು ಮಾತ್ರಾ ಆ ಪುಟ್ಟ
ಹಕ್ಕಿಯ ಮೇಲೇ ಇತ್ತು. ಹಕ್ಕಿ ಕೂಡಾ ನನ್ನ ಈ ಸುತ್ಥಾಟವನ್ನೇ ಬಿಟ್ಟ ಕಣ್ಣಿನಿಂದ ನೋಡುತ್ತಲೇ ಇತ್ತು. ಅದರ ಕ್ಋತಜ್ಷತಾ ಭಾವ ತುಂಬಿದ ನೋಟ ನನಗೆ ಧ್ಯಾಂಕ್ಸ್
ಹೇಳುತ್ತಿದೆಯೇನೋ ಎಂಬಂತಿತ್ತು. ಪುನ: ಇನ್ನೊಮ್ಮೆ ಹಕ್ಕಿಗೆ ನೀರು ಚಿಮುಕಿಸಿದರೆ ಒಳಿತೆಂದು ಭಾವಿಸಿ ನಾನು ಅದನ್ನು ಸಮೀಪಿಸಿದೆ. ಎರಡು ಹೆಜ್ಜೆ ಹಿಂದೆ-ಮುಂದೆ ಚಲಿಸಿ,
ಮ್ಐ ಕೊಡವಿ, ಆ ಪುಟ್ಟ ಹಕ್ಕಿ "ಭರ್" ಎಂದು ಹಾರುತ್ತಾ ನಮ್ಮ ಹಿತ್ತಲಿನ ಪಪ್ಪಾಯಿ ಗಿಡದ ಮೇಲೆ ಕುಳಿತು - ಸ್ವಲ್ಪ ಸಮಯದ ನಂತರ ಬಹು ದೂರ ಹಾರಿ ಹೋಯಿತು.
'ಎಲ್ಲೇ ಇರು, ಹೇಗೇ ಇರು, ಸದಾ ನೀ ಸುಖವಾಗಿರು' ಎಂಬ ಹಾರ್ಐಕೆಯನ್ನಲ್ಲದೇ ಬೇರೇನನ್ನೂ ನಾನು ಮಾಡುವ ಸ್ಥಿತಿಯಲ್ಲಿರಲಿಲ್ಲ.

ಆ ಪುಟ್ಟ ಹಕ್ಕಿ ಪುನ: ಹಾರಿದ್ದನ್ನು ಕಂಡು ನನ್ನ ಮನಸ್ಸೂ ಕೂಡ ಬಾನಂಗಳದಲ್ಲಿ ಗರಿಗೆದರಿ ಬಹು ಸಂತೋಷ-ಸಮಾಧಾನದಿಂದ ಹಾರಾಡಿತು. ಆ ಪುಟ್ಟ ಹಕ್ಕಿಯು ನನ್ನನ್ನು
ದ್ಋಷ್ಟಿಸಿ ನೋಡುತ್ತಿದ್ದ ಅದರ ನೋಟ, ಅದರ ಭಾವ, ಸಂವೇದನೆ ಸದಾ ನನ್ನ ಕಣ್ಣುಗಳಲ್ಲಿ ಮತ್ತು ಮನದಾಳದಲ್ಲಿ ಇಂದೂ ಅಚ್ಚೊತ್ತಿದಂತಿದೆ. ಈ ಅನುಭವವನ್ನು
ನೆನೆಸಿಕೊಂಡಾಗಲೆಲ್ಲ ನನಗೊಂದು ರೀತಿಯ ಆತ್ಮತ್ಋಪ್ತಿ ಮತ್ತು ವರ್ಣಿಸಲಾಗದ ಆನಂದ ಉಂಟಾಗುತ್ತದೆ. ಏನೋ ಒಂದು ರೀತಿಯ ನೆಮ್ಮದಿಯ ಮತ್ತು ಸಮಾಧಾನದ
ಭಾವ ನನದಾಗುತ್ತದೆ.

(ಚಿತ್ರದಲ್ಲಿರುವ ಇದೇ ಹಕ್ಕಿಯ ಮರಿ ಬಿದ್ದದ್ದು; ಇದಕ್ಕೆ ಪಿಕಳಾರ ಹಕ್ಕಿ ಎಂಬ ಹೆಸರಿದೆ ಎನ್ನುತ್ತಾರೆ.)

[2008 ರಲ್ಲಿ ಕವಿ ಪ್ರಕಾಶನ, ಶಿವಮೊಗ್ಗ, ಇವರಿಂದ ಪ್ರಕಟವಾದ ನನ್ನ "ಉತ್ಕ್ಋಷ್ಟದೆಡೆಗೆ" ಎಂಬ ಪುಸ್ತಕದಿಂದ ಆಯ್ದ ಲೇಖನ]