ಹಚ್ಚದಿರು ಬೆಂಕಿಯನು...

ಹಚ್ಚದಿರು ಬೆಂಕಿಯನು...

ಕವನ

ಹಚ್ಚದಿರು ಬೆಂಕಿಯನು

ಊರ ಮುಂದಿನ 

ಗುಡಿಗೆ ಸ್ವಾರ್ಥತೆಯ 

ಲಾಭಕ್ಕೆ ಊರವರ ಸೇರಿಸಿ

ಓಟು ನೋಟುಗಳ ನಡುವೆ

ವಿಷಬೀಜ ಬಿತ್ತದಿರು

ಧರ್ಮಾಂದತೆಯನಿಂದು

ನೆಲೆಯಾಗಿಸಿ!

 

ಉಪ್ಪರಿಗೆಯಲಿ ಮಲಗಿದರೂ

ಅನ್ನವನೇ ತಿನ್ನುವರು

ಬೀದಿಯಲಿ ಮಲಗಿದರು 

ಅದನೆ ಮಾಡುವರು

ವ್ಯತ್ಯಾಸವೇನಿಲ್ಲ

ಹೊಟ್ಟೆ ಪಾಡಿನ ಕೆಲಸ

ಹಾಸ್ಯ ಮಾತದು ಬೇಡ

ತಿಳಿಯುತಲಿಯಿಂದು!

 

ಅವರವರ ಭಾವನೆಗೆ

ಬೆಲೆಯ ಕೊಡುತಲಿ ಸಾಗೆ

ಹೊಸತೊಂದು ಯುಗವದುವೆ

ತೆರೆಯುವುದು ಸನಿಹ

ಮಾತು ಮಾತಾಗಿರಲು

ಸುಖ ಬದುಕು ನಮಗಿರಲಿ

ಎಲ್ಲರೊಳು ಒಂದಾಗಿ

ಪ್ರೀತಿಯಲಿ ಬದುಕೋಣ !

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

 

ಚಿತ್ರ್