ಹಣತೆ ಹಚ್ಚಬೇಕು

ಹಣತೆ ಹಚ್ಚಬೇಕು

ಕವನ

🪔ಹಣತೆ ಹಚ್ಚಬೇಕು🪔

 

ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು
ಹಚ್ಚಿದಷ್ಟು ಹೆಚ್ಚು ಬೆಳಗುವ ಹಣತೆ ಹಚ್ಚಬೇಕು

ನಗುವಿನ ಹಣತೆ ಹಚ್ಚಬೇಕು 
ಜನರ ನೋವು ಅಳಿಸಬೇಕು
ಅನ್ನದ ಹಣತೆ ಹಚ್ಚಬೇಕು 
ಜನರ ಹಸಿವು ಅಳಿಸಬೇಕು
!!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು!!

ನೇತ್ರಾದಾನದ ಹಣತೆ ಹಚ್ಚಬೇಕು
ಅಂಧರಿಗೆ ದೃಷ್ಟಿಯ ಬೆಳಕು ನೀಡಬೇಕು
ಕಾಯಕದ ಹಣತೆ ಹಚ್ಚಬೇಕು
ಕಾಯಕದಲ್ಲಿ ದೇವರನ್ನು ಕಾಣಬೇಕು
!!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು!!

ಮೌನದ ಹಣತೆ ಹಚ್ಚಬೇಕು
ಮಾತಿಗೆ ಮೌಲ್ಯ ನೀಡಬೇಕು
ಜ್ಞಾನದ ಹಣತೆ ಹಚ್ಚಬೇಕು
ಜನರ ಅಜ್ಞಾನ ಅಳಿಸಬೇಕು
!!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು!!

ತಾಳ್ಮೆಯ ಹಣತೆ ಹಚ್ಚಬೇಕು
ಮನದ ಕ್ರೋಧವನ್ನು ಅಳಿಸಬೇಕು
ಸ್ನೇಹದ ಹಣತೆ ಹಚ್ಚಬೇಕು
ದ್ರೋಹದ ಮಾರ್ಗ ಅಳಿಸಬೇಕು
!!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು!!

ಪ್ರೀತಿಯ ಹಣತೆ ಹಚ್ಚಬೇಕು
ದ್ವೇಷದ ಭಾವನೆ ಅಳಿಸಬೇಕು
ಒಳ್ಳೆಯ ಗುಣದ ಹಣತೆ ಹಚ್ಚಬೇಕು
ದೇವಗಣ ಮೆಚ್ಚಿ ಹರಸುವಂತಿರಬೇಕು
!!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು!!

✍️📝🖊️🖋️
ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ್