ಹಣತೆ
ಕವನ
ಸುತ್ತಲೆಲ್ಲವು ಕತ್ತಲಾದರು
ಪುಟ್ಟ ಹಣತೆಯು ನಿನಗಿದೆ
ಸೂರ್ಯ-ಚ೦ದ್ರರು ದೂರವಾದರೂ
ಈ ಚಿಕ್ಕ ಬೆಳಕು ನಿನ್ನದೆ
ಕತ್ತಲೆಲ್ಲವ ದೂರಮಾಡಲು
ಆಗದಿದ್ದರು ಹಣತೆಗೆ
ತನ್ನಲಿರುವಾ ಬೆಳಕ ಕೊಡುವುದು
ಕತ್ತಲಲ್ಲಿಹ ಮನಸಿಗೆ
ಸುತ್ತಲಿರುವಾ ಬೆಳಕಿನಲ್ಲಿ
ಮರೆತರೂ ನೀ ಹಣತೆಯಾ
ದಾರಿ ಕಾಣದ ಕತ್ತಲಲ್ಲಿ
ನೆನಪಿಡು ನೀ ಹಣತೆಯಾ
ಸೋಲು-ಗೆಲುವು, ನೋವು-ನಲಿವು
ಇದುವೆ ಅಲ್ಲವೆ ಜೀವನ
ಸೋಲಿನ್ನಲ್ಲೂ ಗೆಲುವ ಕಾಣುವ
ಶಕ್ತಿಯಲ್ಲವೆ ಚೇತನ
ನೋವೆ ಬರಲಿ, ನಲಿವೆ ಬರಲಿ
ಪಸರಿಸೂ ನೀ ಸ೦ತಸ
ಸೋಲಿನಿ೦ದಲೆ ಗೆಲುವ ಪಡೆಯುತ
ಜಗಕೆ ತೋರು ಹೊಸಪಥ