ಹಣದ ಗುಣ
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ
ನಿನ್ನಿಂದಲೇ ತಿಳಿಯುವುದು ಜನರ ಮನದ ಬಣ್ಣ
ಹಣದ ದಾಹ ಅಧಿಕ ಅಹಂಕಾರದ ಪ್ರತೀಕ
ಹೆಚ್ಚಾದರೆ ಅತಿರೇಕ ಕಡಿಮೆಯಾದರೆ ಬರೀ ತಿಲಕ
ನಿನ್ನ ದಯೇ ಇರುವವನು ಆಗುವ ಧನಿಕ
ನಿನ್ನ ದಯೇ ಇಲ್ಲದವನು ಆಗುವ ತಿರುಕ
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ!
ಸುಖ ಸಮೃದ್ಧಿ ತರುವುದು ನೀನೇ
ಸಂಕಟವನ್ನು ತರುವುದು ನೀನೇ
ಬಂಧವನ್ನು ಬೆಸೆಯುವುದು ನೀನೇ
ಬಂಧವನ್ನು ಕಸಿಯುವುದು ನೀನೇ
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ!
ಮತಿ ಕೆಡುವುದು ನಿನ್ನಿಂದ
ಮನ ಕೆಡುವುದು ನಿನ್ನಿಂದ
ನೀತಿ ಕೆಡುವುದು ನಿನ್ನಿಂದ
ನಿಷ್ಠೆ ಕೆಡುವುದು ನಿನ್ನಿಂದ
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ!
ಕಳ್ಳರಾಗುವುದು ನಿನಗಾಗಿ
ಸುಳ್ಳರಾಗುವುದು ನಿನಗಾಗಿ
ಮೋಸ ಮಾಡುವುದು ನಿನಗಾಗಿ
ಅನ್ಯಾಯ ಮಾಡುವುದು ನಿನಗಾಗಿ
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ!
ಆಸೆ ಫಲಿಸುವುದು ನಿನ್ನ ದಯೇಯಿಂದ
ಭಾಷೆ ಬದಲಾಗುವುದು ನಿನ್ನ ದಯೇಯಿಂದ
ವೇಷ ಬದಲಾವಣೆ ನಿನ್ನ ದಯೇಯಿಂದ
ದ್ವೇಷ ಸಾಧನೆ ನಿನ್ನ ದಯೇಯಿಂದ
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ!
ದೇವರ ದರ್ಶನ ಪಡೆಯಲು ನೀನೇ ಬೇಕು
ತೀರ್ಥ ಪ್ರಸಾದ ಪಡೆಯಲು ನೀನಿರಬೇಕು
ನೀ ಕೊಟ್ಟ ರೋಗಕ್ಕೆ ಚಿಕಿತ್ಸೆ ಪಡೆಯಲು ನೀನಿರಬೇಕು
ಹುಟ್ಟಿನಿಂದ ಸಾವಿನ ವರೆಗೂ ನೀನು ಇರಲೇಬೇಕು
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ!
-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
