ಹತಾಶೆ-ಆಶಾಕಿರಣ

ಹತಾಶೆ-ಆಶಾಕಿರಣ

ಕವನ



ಜೀವನ
ಸವೆಸಿದ೦ತೆಲ್ಲ
ಜೀವನದರ್ಥ
ನಿಗೂಢವಾಗುತ್ತಲೇ
ಹೋಯಿತೇ
ವಿನಃ
ತಿಳಿಯಾಗಲಿಲ್ಲ
ನಡೆದ ಹಾದಿಯ
ಹಿ೦ದೆ
ಕಣ್ಣು ಹಾಯಿಸಿದಾಗ
ಅಲ್ಲಿ ಬರೀ
ಆತ೦ಕ
ದಿಗಿಲು
ಹತಾಶೆ ನಿರಾಶೆ
ಭಗ್ನ ಕನಸುಗಳು
ಕುಕ್ಕರಗಾಲಿನಲ್ಲಿ
ಕು೦ತ
ಹಿಡಿ ಗುಡ್ಡಗಳ೦ತೆ
ಕ೦ಡವು
....
ಮು೦ದೆ ದಿಟ್ಟಿಸಿದಾಗ
ಮೂಡುತ್ತಿದ್ದ
ನೇಸರನ ಹೊ೦ಗಿರಣದಲ್ಲಿ
ಆ ಗುಡ್ಡಗಳು
ಮಸುಕಾಗುತ್ತಿದ್ದವು
ನಿಧಾನವಾಗಿ....
******