ಹತ್ತಿ-ಬಿಳಿ ಬಂಗಾರ, ಭಾರತದ ಭಾಗ್ಯದೇವ !
ಭಾರತ ಹತ್ತಿ ಬೆಳೆಯ ತೊಟ್ಟಿಲು. ಹಾಗೂ ವಿಶ್ವದಲ್ಲಿ ಉತ್ಪನ್ನವಾದ ಹತ್ತಿ ಬಟ್ಟೆಗಳಲ್ಲಿ ಭಾರತದ 'ಧಾಕ'ದಲ್ಲಿ ತಯಾರಾದ ' ಢಾಕ ಮಸ್ಲಿನ್' ಎನ್ನುವ ವಸ್ತ್ರ ಅತ್ಯಂತ ಮಹೀನವಾಗಿತ್ತು ಎನ್ನುವ ಮಾತು ಸರ್ವವಿದಿತ. ಆದರೆ ಆ ವಸ್ತ್ರಗಳನ್ನು ತಯಾರಿಸುವ 'ಕಾರಿಕರ್' ಗಳು ಕಾಲಕ್ರಮೇಣ ಕಾಣೆಯಾದಾಗ, ಆಗಾಗಲೇ ಭಾರತದಲ್ಲಿ ಉಪಲಭ್ದವಿದ್ದ ಬ್ರಿಟಿಷ್ ನಿರ್ಮಿತ ಯಂತ್ರಗಳಿಂದ ನಮ್ಮ ದೇಶದ ಹತ್ತಿಯನ್ನು ಬಳಸಿ ದಾರ ತಯಾರಿಸುವುದು, ಬಟ್ಟೆನೇಯುವುದು ಅಸಾಧ್ಯವಾಗಿತ್ತು. ಚಿಕ್ಕ ತಂತುಗಳಿಂದ ಕೂಡಿದ ಈ ನಾರಿನ ತಂತುಗಳನ್ನು ದೊಡ್ಡದಾಗಿ ಬೆಳೆಸಿ, ಅವುಗಳ ಗುಣವನ್ನು ಅಭಿವೃದ್ಧಿ ಪಡಿಸುವ ನೆಲೆಯಲ್ಲಿ ಕಾಲ ಕಾಲಕ್ಕೆ ತಕ್ಕ ದಾರಿಯನ್ನು ತೋರಿಸುವ ದಿಕ್ಕಿನಲ್ಲಿ ಬೊಂಬಾಯಿನಲ್ಲಿ ಸ್ಥಾಪಿಸಲ್ಪಟ್ಟ 'ಟೆಕ್ನೋಲಾಜಿಕಲ್ ಲ್ಯಾಬೋರೇಟೋರಿ' (ಈಗಿನ ಸಿರ್ಕಾಟ್ ಸಂಸ್ಥೆ) ಬಹಳ ಮಹತ್ವದ ಪಾತ್ರ ವಹಿಸಿದೆ. ಇಂದಿಗೂ ವಹಿಸುತ್ತಿದೆ. ಇದೆಲ್ಲಾ ಬ್ರಿಟಿಷರಿಂದ ಮತ್ತು ಅವರ ಮೇಲ್ವಿಚಾರಣೆಯಲ್ಲಿ ಆಯಿತು ಎನ್ನುವುದನ್ನು ನಾವು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ.
|
||||||||||||||||||||||||||||||||||||||||||||||||||||||||||||||||
-ಮಾರ್ಚ್ ,೨೦೧೩ | ||||||||||||||||||||||||||||||||||||||||||||||||||||||||||||||||
ಅಮೆರಿಕವೂ ಸೇರಿದಂತೆ
ಅಮೆರಿಕವೂ ಅಮೆರಿಕವೂ ವಿಶ್ವದ ಬಹುಭಾಗ ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದ್ದುದರಿಂದ ಎಲ್ಲಕ್ಕೂ ಬ್ರಿಟನ್ನನ್ನೇಲ್ಲರೂ ಅನುಸರಿಸಬೇಕಾದ ಪ್ರಮೇಯ ಬಂದೊದಗಿತ್ತು. ಅಮೇರಿಕಾದಲ್ಲಿ ಹತ್ತಿಯನ್ನು ಆಫ್ರಿಕದಿಂದ ಕರೆತಂದ ಕರಿಗುಲಾಮ ಜನರ ಸಹಾಯದಿಂದ ಬೆಳೆದರೂ ಬಟ್ಟೆ ತಯಾರಿಸುವ ಉದ್ಯಮ ವಿಕಸತಗೊಂಡಿರಲಿಲ್ಲ.
ರಾಜಕಾರಣ ಬೇರೆ. ದೇಶಾಭಿವೃದ್ಧಿಯ ಮಹತ್ಕಾರ್ಯಗಳು ಬೇರೆ. ಹಾ. ಇಂತಹ ಭಾರಿ ಸಾಹಸದ ಕೆಲಸಕ್ಕೆ, ಅಂದರೆ ಇಡೀ ದೇಶದ ವಿವಿಧ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಹತ್ತಿ ಫಸಲನ್ನು ಕಲೆಹಾಕಿ ಬೊಂಬಾಯಿನ ಗೆ ಕಳಿಸಿ ಮೂಲ್ಯಾಂಕನ ಮಾಡಬೇಕು ಮತ್ತು ಕಳಪೆ ತಳಿಗಳನ್ನು ತೆಗೆದು ಉತ್ತಮ ತಳಿಗಳನ್ನು ನೆಟ್ಟು ಅದನ್ನು ಬಳಕೆಯಲ್ಲಿ ತರುವ ಬೃಹತ್ ಪ್ರಯತ್ನ ಹಲವು ದಶಕಗಳ ದೀರ್ಘ ಕಾಲದ ಅಭಿಯಾನವಾಗಿತ್ತು. ಇದರಲ್ಲಿ ಕೈಹಾಕಲು ಅವರು ಮುಂದೆ ಬಂದದ್ದು ತಮ್ಮ ವೈಯಕ್ತಿಕ ಪ್ಹಾಯಿದೆಯ ಕಾರಣಕ್ಕೆ ಎಂದು ಹೇಳಬಹುದಾದರೂ, ಮುಂದೆ ಅದು ನಮ್ಮ ಭಾರತಕ್ಕೆ ಬಹುದೊಡ್ಡ ಕೊಡುಗೆಯಾಯಿತು ಎನ್ನುವುದು ಒಪ್ಪುವಮಾತು.
ಬ್ರಿಟನ್ ನ ಹತ್ತಿ ಉದ್ಯಮ ನೆಲ ಕಚ್ಚಲು ಜರುಗಿದ ಪ್ರಮುಖ ಕಾರಣಗಳು
ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸಿದರು. ತಾವೇ ಕಾರ್ಖಾನೆಗಳನ್ನು ಸ್ಥಾಪಿಸಿ, ಬಟ್ಟೆ ತಯಾರಿಸುವ ಕಾರ್ಯದಲ್ಲಿ ತೊಡಗಿದರು. ಹೀಗಾಗಿ ಇಂಗ್ಲೆಂಡ್ ನ ಕಾರ್ಮಿಕರಿಗೆ ಕಚ್ಚಾ ಮಾಲಿಲ್ಲದೆ ಗಿರಣಿಗಳು ಮುಚ್ಚಿದವು. ದೇಶದ ಕಾರ್ಮಿಕರಿಗೆ ಉದ್ಯೋಗಾವಕಾಶದಿಂದ ವಂಚಿತರನ್ನಾಗಿ ಮಾಡದಿರುವುದು, ಮತ್ತು ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಮಹಾದುದ್ದೇಶದಿಂದ. ಆದರೆ. ತಮ್ಮ ಕಾರ್ಯದ ಫಲ ಅನುಭವಿಸುವುದು ಅವರ ಹಣೆಯಲ್ಲಿ ಬರೆದಿರಲಿಲ್ಲ. ಜಪಾನ್, ಜರ್ಮನಿ, ಭಾರತ ಅರ್ಜೆಂಟಿನ ಮೊದಲಾದ ದೇಶಗಳಲ್ಲಿ ಹತ್ತಿ ಬಟ್ಟೆಯ ಕಾರ್ಖಾನೆಗಳು ಸ್ಥಾಪಿಸಲ್ಪಟ್ಟು ಬ್ರಿಟಿಷ್ ಉತ್ಪನ್ನಗಳನ್ನು ಕೊಳ್ಳುವರು ಇಲ್ಲದೆ ಹೋ ಯಿತು. (ಎಲ್ಲರನ್ನೂ ದೇಶದೊಳಗೆ ಬಿಟ್ಟವರು ನಾವೇ) ಬಂದ ಎಲ್ಲಾ ವಿದೇಶಿಯರಿಗೆ ಹೋಲಿಸಿದರೆ ಬ್ರಿಟಿಷ್ ಸಾಮ್ರಾಜ್ಯದ ಆಡಳಿತದ ಕಾಲಾವಧಿಯಲ್ಲಿ ನಮಗೆ ಬೇಕಾದಷ್ಟು ಫಾಯಿದೆ ಆಗಿದೆ ಎನ್ನುವುದನ್ನು ಮನಗಾಣಬಹುದು. ಹಾಗೆ ನೋಡಿದರೆ, ವಿಶ್ವದ ಮೂಲೆ ಮೂಲೆಗೂ ಹೋಗಿ ತಮ್ಮ ಪ್ರಭುತ್ವ ಸ್ಥಾಪಿಸಲು ಅವರು ಮುಂದೆ ಬಂದರು. ತಾವು ಹೋಗಿ ನೆಲಸಿದ ಪ್ರದೇಶಗಳನ್ನೂ ಅತ್ಯಂತ ಸಮರ್ಥವಾಗಿ ಮುಂದೆ ತಂದರು ಎನ್ನುವುದು ನಿರ್ವಿವಾದ. ಇದಕ್ಕೆ ಮೊದಲೇ ಸುಮಾರು ಒಂದು ದಶಕದ ಹಿಂದೆಯೇ ಭಾರತ ರಾಷ್ಟ್ರದ ಹತ್ತಿ ಬೆಳೆಯುವ ಪ್ರಾಂತ್ಯಗಳನ್ನು ಪತ್ತೆಹಚ್ಚಿ ಅಲ್ಲಿನ ಬೆಳೆಗಳ ವಿವರ, ಭೂಮಿಯ ಮಣ್ಣಿನ ಗುಣ, ಹವಾಮಾನ, ಮಳೆ, ನೀರಿನ ವಿವರ, ಮೊದಲಾದುವನ್ನು ಸಂಗ್ರಹಿಸಿ ಒಂದು 'ನೀಲ ನಕ್ಷೆ'ಯನ್ನು ತಯಾರಿಸಿ ತಮ್ಮ ಸರ್ಕಾರಕ್ಕೆ ಒದಗಿಸಿದ್ದರು. ಆದ್ದರಿಂದ ಬೊಂಬಾಯಿನ ಪ್ರಧಾನ ಕಟ್ಟಡ ನಿರ್ಮಾಣವಾದ ತಕ್ಷಣವೇ, ಸಂಶೋಧನಾ ಕಾರ್ಯ ಭರದಿಂದ ಆರಂಭವಾಯಿತು.
ಬ್ರಿಟಿಷ್ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಗಮನವಿಟ್ಟು ವೀಕ್ಷಿಸಿದರೆ ನಮಗೆ ಗೋಚರಿಸುವ ಸಂಗತಿಗಳು :
೧೯೨೪ ರಲ್ಲಿ ತಯಾರಾದ ಯಂತ್ರೋಪಕರಣಗಳು ಅದೇ ವರ್ಷ ಬೊಂಬಾಯಿಗೆ ಸಮುದ್ರದ ಮೂಲಕ ರಫ್ತಾಗಿ ಆ ಯಂತ್ರಗಳನ್ನು ಸ್ಥಾಪಿಸಿ ವರ್ಷದ ಕೊನೆಯಲ್ಲಿ ಆ ಯಂತ್ರಗಳಲ್ಲಿ ಹತ್ತಿಯನ್ನು ಉಪಯೋಗಿಸಿ ದಾರವನ್ನು ತಯಾರಿಸಲಾಯಿತು. ಆ ದಾರದ ಗುಣದ ಮೂಲ್ಯಾಂಕನ ನಡೆದು ಅದರ ಬ್ಯೌರಗಳನ್ನು ಪ್ರಕಟಿಸಲಾಯಿತು. ಹಳೆಯ ತಳಿಗಳನ್ನು ಕಿತ್ತುಹಾಕಿ ಉತ್ತಮ ಸುಧಾರಿತ ಹತ್ತಿ ತಳಿಗಳು ನಿಧಾನವಾಗಿ ನಮ್ಮ ರಾಷ್ಟ್ರದ ಉತ್ತರ ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಬೆಳೆಯಲು ಆರಂಭಿಸಿದವು ಬ್ರಿಟಿಷ್ ತಜ್ಞರು ನಮ್ಮ ವಿಜ್ಞಾನಿಗಳಿಗೆ ಹೆಚ್ಚಿನ ಮಾಹಿತಿಗಳನ್ನು ಕೊಟ್ಟು ಬೇಸಾಯದ ಕೆಲವು ಸೂಕ್ಷ್ಮಗಳನ್ನು ತಿಳಿಯ ಹೇಳಿ , ಅವರನ್ನು ತರಪೇತಿಗೊಳಿಸಿದರು. ಇಂತಹ ಕಾರ್ಯ ವಿಶ್ವದ ಹತ್ತಿ ಫಸಲು ಬೆಳೆಯುವ ರಾಷ್ಟ್ರಗಳಲ್ಲೆಲ್ಲ ನಡೆಯಿತು. ಈ ತರಹದ ವಿಶೇಷ ಕಾರ್ಯವೈಖರಿ ನಮ್ಮ ದೇಶದ ಜನರಲ್ಲಿ ಕಾಣುವುದು ಅಪರೂಪ. ಇದನ್ನು ನಾವು ಮೆಚ್ಚಲೇಬೇಕು. ಅಂತಹ ಉತ್ತಮ ನಡವಳಿಕೆಗಳನ್ನು ನಾವೂ ಕಲಿಯುವುದು ರಾಷ್ಟ್ರದ ಹಿತದೃಷ್ಟಿಯಿಂದ ಶ್ರೆಯಸ್ಕರ.
ಬೊಂಬಾಯಿನಲ್ಲಿ ಅವರು ಮಾಡಿದ ಘನ ಕಾರ್ಯಗಳು
* ಬೊಂಬಾಯಿನ ಕೋಟೆ ಪ್ರದೇಶದಲ್ಲಿ ಸಮುದ್ರದಿಂದ ಭೂಮಿಯನ್ನು ಪಡೆಯಲು ಶ್ರಮಿಸಿದರು.
* ಬೊಂಬಾಯಿನ ಕೋಟೆ ಪ್ರದೇಶದ ದುರಸ್ತಿ,
* ಮಹಾನಗರಕ್ಕೆ ಕುಡಿಯುವ ನೀರಿನ ವ್ಯವಸ್ತೆ,
* ಸಂಚಾರಯಾನದಲ್ಲಿ ಬಸ್ ಟ್ರಾಮ್, ಮತ್ತು ರೈಲ್ವೆಯ ಯೋಗದಾನ,
* ಭಾರತದ ಮೊಟ್ಟ ಮೊದಲ ರೈಲ್ವೆ ಸಂಚಾರ ವ್ಯವಸ್ಥೆ,
* ಬೊಂಬಾಯಿ ಬಂದರಿನ ನಿರ್ಮಾಣ ನಿರ್ವಹಣೆ,
* ಹತ್ತಿ ಗಿರಣಿಗಳು, ಕಾರ್ಖಾನೆ ನಿರ್ಮಾಣದಲ್ಲಿ ಸಹಾಯ,
* ಇಂಪೀರಿಯಲ್ ಬ್ಯಾಂಕ್ ನ ನಿರ್ಮಾಣ,
* ಬಾಂಬೆ ಗ್ರೀನ್ ನಲ್ಲಿ, ಹತ್ತಿ ಗೋಡೋನ್ ಗಳ ನಿರ್ಮಾಣ, ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡ ನಿರ್ಮಾಣ,
* ವಿದ್ಯಾಬ್ಯಾಸಕ್ಕೆ ಶಾಲೆ ಕಾಲೇಜ್ ವಿಶ್ವವಿದ್ಯಾಲಯಗಳ ಗಳ ನಿರ್ಮಾಣ,
* ಎಲ್ಫಿನ್ ಸ್ಟೋನ್ ಕಾಲೇಜ್, ಸಿಧ್ನಮ್ ಕಾಲೇಜ್, ಸೈನ್ಸ್ ಇನ್ಸ್ಟಿ ಟ್ಯೂಟ್ ನಿರ್ಮಾಣ,
* ಮಾಟುಂಗಾದಲ್ಲಿ ಸಿ.ಟಿ. ಆರ್. ಎಲ್. ಲ್ಯಾಬೋರೆತೋರಿ ಸ್ಥಾಪನೆ,
* ಗೇಟ್ವೇ ಆಫ್ ಇಂಡಿಯಾ ಸ್ಥಾಪನೆ,
* ಪುಸ್ತಕ ಭಂಡಾರ, ವಸ್ತುಸಂಗ್ರಹಾಲಯ,
* ಮ್ಯಾಥೆರಾನ್ ತಮಗೂ ತಾಣದ ನಿರ್ಮಾಣ, ಅಜಂತಾ ಎಲ್ಲೋರಾ ಗುಹೆಗಳ ಇತ್ಯಾದಿ ಇತ್ಯಾದಿ..
* ಬ್ರಬೋರ್ನ್ ಸ್ಟೇಡಿಯಂ ನಿರ್ಮಾಣ, ಮೊದಲಾದವುಗಳು.
ಅಮೇರಿಕಾದ ವಿಜ್ಞಾನಿ ಎಲಿ ವಿಟ್ನಿ ಎಂಬ ಏಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೊಬ್ಬ ಹತ್ತಿಯಿಂದ ಬೀಜ ತೆಗೆಯುವ ಯಂತ್ರದ ಅತಿ ಮಹತ್ವದ ಆವಿಷ್ಕಾರ ಮಾಡಿದನು. ಅದರಿಂದ ಹತ್ತಿಯನ್ನು ಬೇಲು ಕಟ್ಟಿ ಹಡಗುಗಳಲ್ಲಿ ರಫ್ತುಮಾಡಲು ಅನುಕೂಲವಾಯಿತು.
ಈ ಆವಿಷ್ಕಾರದ ಜೊತೆಗೆ ಇನ್ನೂ ಹಲವಾರು ಜನಹಿತ ಆವಿಷ್ಕಾರಗಳನ್ನು ಮಾಡಿ ಅಮೆರಿಕದಲ್ಲಿ ಯಮ್ತ್ರೋದ್ಯಮಕ್ಕೆ ನಾಂದಿ ಹಾಕಿದ ಶ್ರೇಷ್ಠ ಪುರುಷರಲ್ಲೊಬ್ಬ ' ಎಲಿ ವಿಟ್ನಿ' ಎನ್ನಬಹುದು.
ಈಗ ಅಮೇರಿಕದ ಜನತೆ ತಮ್ಮ ದೇಶದಲ್ಲೇ
ಕಾರ್ಖಾನೆಗಳನ್ನು ಸ್ಥಾಪಿಸಿ ತನಗೆ ಬೇಕಾದ ವಸ್ತುಗಳನ್ನು ತಯಾರಿಸತೊಡಗಿತು. ಹತ್ತಿ ಬಟ್ಟೆಯ ಜೊತೆಗೆ ಹಲವಾರು ಕಾರ್ಖಾನೆಗಳು ಶುರುವಾದವು. ಇಂಗ್ಲೆಂಡ್ ನ ಪ್ರಭಾವ ಕಡಿಮೆಯಾಗತೊಡಗಿತು. ಕಚ್ಚಾ ಹತ್ತಿ ಸಿಗದೇ ಉದ್ಯಮ ನಲುಗಿತು. ಲಕ್ಷಾಂತರ ಜನ ನಿರುದ್ಯೋಗಿಗಳಾದರು. ಆಗ ಹತ್ತಿಯನ್ನು ಬೆಳೆಯುತ್ತಿದ್ದ ಭಾರತದ ಕಡೆ ಅವರ ಗಮನ ಹರಿಯಿತು. ಆದರೆ ನಮ್ಮ ದೇಶದ ಹತ್ತಿಯ ತಂತುಗಳು ಬಹಳ ಚಿಕ್ಕದಾಗಿದ್ದು ಯಂತ್ರಗಳಲ್ಲಿ ಅವನ್ನು ಬಳಸಲು ಕೆಲವು ಅಡಚಣೆಗಳು ಬಂದವು. ಗೃಹ ಕೈಗಾರಿಕೆಯಲ್ಲಿ ಅದರಿಂದಲೇ ನಮ್ಮ ನುರಿತ ಕಾರಿಗರ್ ಗಳು ವಸ್ತ್ರಗಳನ್ನು ತಯಾರಿಸುತ್ತಿದ್ದರು. ಆದರೆ ಇವಕ್ಕೆ ಬಹಳ ಸಮಯ ಹಿಡಿಯುತ್ತಿತ್ತು. ಇಂತಹ ಕಾರಿಗರ್ ಗಳು ಕ್ರಮೇಣ ಸಿಗುವುದು ದುಸ್ತರವಾಗಿ ಎಲ್ಲರೂ ಯಂತ್ರಗಳ ಬಳಕೆಗೆ ಮೊರೆಹೊಕ್ಕರು. ಆಗ ಈ ಅನುಸಂಧಾನ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಮೊಟ್ಟಮೊದಲು ಬ್ರಿಟನ್ನಿನ ಕಾರ್ಮಿಕ್ದರ ಸಂಕಸ್ಥಕ್ಕೆ ಸ್ಪಂದಿಸಿ ಡಿಸೆಂಬರ್ ೩ ರಂದು ಆಗಿನ ಗವರ್ನರ್ ಜನರಲ್ ರು ದೆಹಲಿಯಿಂದ ಬೊಂಬಾಯಿಗೆ ಬಂದರು. ಮಾರನೆಯ ದಿನ ಕೋಟೆ ಪ್ರದೇಶದಲ್ಲಿದ್ದ ಗೇಟ್ ವೇ ಆಫ್ ಇಂಡಿಯ ಸ್ಮಾರಕ ಅನ್ನು ಉದ್ಘಾಟಿಸಿ ಜನತೆಗೆ ಸಮರ್ಪಿಸಿದರು.
ಈಗ ನಮ್ಮ ದೇಶದ ಹತ್ತಿ ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಉತ್ತಮ ಹತ್ತಿ ತಳಿಗಳು ಲಭ್ಯವಾಗುತ್ತಿವೆ. ಇಳುವರಿಯಲ್ಲೂ ಸಾಧನೆಯಾಗಿದೆ. ಹತ್ತಿ ಬೆಲೆಯನ್ನು ನಂಬಿದ ಕೃಷಿಕರ ಮುಖದಲ್ಲಿ ಸಮಾಧಾನದ ಮುಗುಳ್ನಗೆ ಕಾಣಬರುತ್ತಿದೆ.
ದೇಶದ ಹದಕೆಟ್ಟ ಇಂದಿನ ರಾಜಕೀಯ ವಾತಾವರಣ :
ಹಾಗೆಂದ ಮಾತ್ರಕ್ಕೆ ಎಲ್ಲವೂ ಸರಿಯಿದೆ ಎಂದಲ್ಲ ಹಾಗೆ ನೋಡಿದರೆ ಏನು ಸರಿಯಾಗಿದೆ. ಎಲ್ಲವೂ ಗೊಂದಲಮಯ. ನಮಗೆ ಸಿಕ್ಕ ಪ್ರಜಾಪ್ರಭುತ್ವವನ್ನು ಇನ್ನೂ ಅರ್ಥಮಾಡಿಕೊಂಡು ಅದರ ಸವಿಯನ್ನು ಸವಿಯಲು ಇನ್ನೂ ಅದೆಷ್ಟು ದಶಕಗಳು ಬೇಕೋ ಗೊತ್ತ್ಲಿಲ್ಲ ಕಾರಣ ನಮ್ಮ ದೇಶದ ಅಗಾದ ವೈಪರೀತ್ಯಗಳು ಭಾಷೆ, ಜಾತಿ, ಪ್ರಗತಿಪರ ಹಾಗು ಇನ್ನು ಹೀನಸ್ಥಿತಿಯಲ್ಲಿರುವವರ ನಡುವಿನ ಭಾರಿ ಅಂತರಗಳು, ಲಂಚಕೋರರು, ಮೋಸಗಾರರು, ಸಮಯಸಾಧಕರು, ಗೋಮುಖ ವ್ಯಾಘ್ರಿಗಳು, ದೇಶದಾದ್ಯಂತ ತುಂಬಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು, ಮತ್ತು ನಿರಾಶಾವಾದಿಗಳಿಂದ ನಮ್ಮ ದೇಶ ಸುರಕ್ಷಿತವಾಗಿಲ್ಲ. ಉನ್ನತ ವಿದ್ಯಾಭ್ಯಾಸ, ಸಾಕ್ಷರತೆ, ಎಲ್ಲಾ ಕಡೆಗಳಲ್ಲಿ ಕಾಣಬಂದರೂ ದೇಶದ ಅಪಾರ ಜನಸಂಖ್ಯಾ ಸ್ಪೋಠದಿಂದ ನಮ್ಮ ಪರಿಶ್ರಮವೆಲ್ಲಾ ನೀರುಪಾಲಾಗಿದೆ. ವಿಜ್ಞಾನ ತಂತ್ರಜ್ಞಾನ, ಐಟಿ ವಲಯದಲ್ಲಿನ ಅಗಾಧ ಪ್ರಗತಿಯಾಗಿದೆ. ಮಧ್ಯಮ ವರ್ಗದ ಜನ ದೊಡ್ಡ ಉದ್ಯಮಗಳನ್ನು ಚೆನ್ನಾಗಿ ಸಂಭಾಳಿಸಿಕೊಮ್ದು ಹೋಗುತ್ತಿದ್ದಾರೆ. ಮಹಿಳೆಯರ ಪಾತ್ರದಲ್ಲಿ ಗಮನಾರ್ಹ ಪ್ರಗತಿ ಕಾಣಬರುತ್ತಿದೆ.
ನಮ್ಮ ಅಧೋಗತಿಗೆ ನಾವೇ ಕಾರಣ :
'ಅತಿಥಿ ದೇವೋಭವದ ಕಲ್ಪನೆ'ಯನ್ನು ಸರಿಯಾಗಿ ಅರಿಯದ ನಾವು ಹೊರಗಿನವರನ್ನು ನಮ್ಮ ತಲೆಯ ಮೇಲೆ ತಂದುಕೊಂಡು ನಂತರ ಕೊರಗಿದೆವು.
ಬೇರೆ ಬೇರೆ ಸಮುದಾಯದ ಜನಗಳು ಕಾಲಕಾಲಕ್ಕೆ ನಮ್ಮ ದೇಶಕ್ಕೆ ನುಗ್ಗಿಬರಲು ಅವಕಾಶಮಾಡಿಕೊಟ್ಟು ಗೊಂದಲಕ್ಕೆ ಸಿಕ್ಕಿಹಾಕಿಕೊಂಡ ನಮಗೆ ಇಡೀ ಭಾರತ ರಾಷ್ಟ್ರದ ಕಲ್ಪನೆಯೇ ಇಲ್ಲದೆ ಇಂತಹ ಭಾರಿ ರಾಷ್ಟ್ರದ ಮಾಲಿಕತ್ವವನ್ನು ಇಂದಿಗೂ ಸರಿಯಾಗಿ ನಿಭಾಯಿಸುತ್ತಿಲ್ಲ. ಇಂತಹ ವಲಸೆಗಾರದಲ್ಲಿ ಕೊನೆಯಲ್ಲಿ ಬಂದ ಬ್ರಿಟಿಷ್ ಸಮುದಾಯ ಕೆಲವು ಅತ್ಯುತ್ತಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದೆ. ಹಾಗೆ ನೋಡಿದರೆ, ವಿಶ್ವದ ಹಲವಾರು ಭಾಗಗಳಲ್ಲಿ ಬ್ರಿಟಿಷ್ ಇದ್ದ ಕಡೆ ಬಹಳ ನಾಗರಿಕ ಸೌಲಭ್ಯ ಗಳು ಅತ್ಯುತ್ತಮ ರೀತಿಯಲ್ಲಿ ವ್ಯವಹಾರದಲ್ಲಿ ಇಂದಿಗೂ ಇರುವುದನ್ನು ನೋಡಬಹುದು. ಅದಕ್ಕೆ ಉತ್ತಮ ಉದಾಹರಣೆ, ದಕ್ಷಿಣ ಅಮೇರಿಕ ಖಂಡ. ಅಲ್ಲಿ ಬ್ರಿಟಿಷ್ ಜನ ಹೆಚ್ಚಾಗಿ ಇರಲಿಲ್ಲ. ಒಟ್ಟಿನಲ್ಲಿ ನಾವು ನಮ್ಮ ಇಂದಿನ ಜೀವನವನ್ನು ಉತ್ತಮ ಗೊಳಿಸುತ್ತಾ ಹಳೆಯರಿಂದ ಉತ್ತಮ ಪಾಠ ಕಲಿಯುತ್ತಾ ಮುಂದುವರೆಯುವುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಲ್ಲೇ ನಮಗೆ ಶ್ರೇಯಸ್ಸು. ವಿಶ್ವದ ಯುದ್ಧಗಳನ್ನೂ ನೋಡಿದರೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ತನುಮನಧನಗಳನ್ನು ತೆತ್ತು ಮಡಿದವರ ಸಂಖೆ ಬಹಳ ಕಡಿಮೆ. . ಅದು ಮಹಾತ್ಮಾ ಗಾಂಧಿಯವರಂಥ ಸಮರ್ಥ ಹಾಗೂ ನುರಿತ ಸಾರಥ್ಯದಿಂದ ಮಾತ್ರ ಸಾಧ್ಯವಾಯಿತು. ಮತ್ತೆ ನಮಗೆ ಸ್ವಾತಂತ್ರ್ಯ ಹೇಗೆ ಬಂತು ಎನ್ನುವುದು ಊಹಿಸಲೂ ಅಸಾಧ್ಯ. ಸನ್ ೧೮೧೨ ರ, ಅಮೇರಿಕಾ, ಗ್ರೇಟ್ ಬ್ರಿಟನ್ ಯುದ್ಧ ಎರಡೂ ವರೆವರ್ಷ ಜರುಗಿತು. ಒಂದೆ ಭಾಷೆ ಮಾತಾಡುವ ಒಂದೆ ಪ್ರದೇಶದಿಂದ ವಲಸೆ ಬಂದ ಜನ ಬೇರೆ ಕಣ್ಣು ಕಾಣದ ರಾಷ್ಟ್ರದಲ್ಲಿ ಒಬ್ಬರಿಗೊಬ್ಬರು ವಿರೋಧಿಗಳಾಗಿ ಹೊರಾಡಬೇಕಾಯಿತು.
ನಮ್ಮ ದೇಶದಲ್ಲಿ ಉತ್ತಮ ಹತ್ತಿ ತಳಿಗಳು ಮಾರುಕಟ್ಟೆಗೆ ಬಂದಿವೆ. ಕೃಷಿಕರ ವರಮಾನದಲ್ಲಿ ಉತ್ತಮ ಪ್ರಗತಿಯಾಗಿದೆ. ಬಿ.ಟಿ. ತಂತ್ರಜ್ಞಾನವನ್ನು ರೈತರು ಒಪ್ಪಿಕೊಂಡು ಒಳ್ಳೆಯ ಲಾಭ ಗಳಿಸುತ್ತಿದ್ದಾರೆ.
ಭಾರತದ ಇತಿಹಾಸದಲ್ಲಿ ಹತ್ತಿ ಬೆಳೆ, ಅದಕ್ಕೆ ಸಂಬಂಧಿಸಿದ ಉದ್ಯಮವನ್ನು ಗಮನಿಸಿದರೆ
ಜವಾಹರ್ ಲಾಲ್ ನೆಹರೂ ರವರ ಪ್ರಕಾರ,
“………..When I think of textile my mind travels back some thousand of years to the period when India perhaps was the only country producing these cotton based textiles and exporting them to distant lands……….”
The history of cotton and of textile is not only the history of the growth of modern industry in India, but in a sense it might be considered the history of India during the past one hundred years.”
ಬ್ರಿಟಿಷರು ವಿಶ್ವದಾದ್ಯಂತ ಆಯೋಜಿಸಿದ 'ಹತ್ತಿ ಗುಣ ಸಂವರ್ಧನ ಅಭಿಯಾನ' ದಿಂದ ಸೂಡಾನ್ ದೇಶದಲ್ಲಿ ಸುಮಾರು ಒಂದು ಮಿಲಿಯನ್ ಬೇಲ್ ಹತ್ತಿಯನ್ನು ಕೇವಲ ಒಂದು ದಶಕದಲ್ಲಿ ಬೆಳೆದು ಒಂದು ವಿಕ್ರಮವನ್ನು ಸಾಧಿಸಲಾಯಿತು ಎನ್ನುವುದು ನಿಜಕ್ಕೂ ಪ್ರಶಂಸನೀಯ. ನಮ್ಮ ಇಂದಿನ ಸಿರ್ಕಾಟ್ ಸಂಶೋಧನಾಲಯದ ಮೊತ್ತಮೊದಲ ಡೈರೆಕ್ಟರ್, ಡಾ. ಟರ್ನರ್, ರಿಚರ್ಡ್ಸನ್, ಸರ್.ವಿಲಿಂ ಲಾರೆನ್ಸ್ ಬಾಲ್ಸ್,ರ್ಯೂಫಸ್ ಐಸಾಕ್ಸ್, ಫಸ್ಟ್ ಮಾರ್ಕ್ವೆಸ್ ಆಫ್ ರೀಡಿಂಗ್,
ಗವರ್ನರ್ ಜನರಲ್ ಮೊದಲಾದವರನ್ನು ನೆನೆಯಲೇಬೆಕು. ಅವರು ನಮ್ಮ ಲ್ಯಾಬೋರೇಟೊರಿಯ ಹಲವು ಸ್ಥಾನೀಯರನ್ನು ಚೆನ್ನಾಗಿ ತರಪೇತಿಗೊಳಿಸಿ ಸಧ್ರುಢರನ್ನಾಗಿ ಮಾಡಿದ ಕಾರ್ಯ ಶ್ಲಾಘನೀಯ. ಸ್ವಾತಂತ್ರ್ಯನಂತರವೂ ನಮ್ಮ ಬೊಂಬಾಯಿನ ಬಾಂಬೆ ಟಕ್ಸ್ ಟೈಲ್ಸ್ ರಿಸರ್ಚ್ ಅಸೋಸಿಯೇಶನ್ ಕಾರ್ಯಾಲಯಕ್ಕೆ ಡಾ. ಟರ್ನರ್ ಭೇಟಿ ನೀಡಿ ತಮ್ಮ ಅನುಪಮ ಸಲಹೆಗಳನ್ನು ಕೊಟ್ಟು, ಈಗಿನ ಕಾರ್ಯಗಳನ್ನು ಶ್ಲಾಘಿಸಿ, ಹೊಸ ತಂತ್ರಜ್ಞಾನದಲ್ಲಿ ತರಪೇತಿ ಮೊದಲಾದವುಗಳನ್ನು ನೀಡಿ ಸಹಕರಿಸಿದರು. ಆ ಮಹನೀಯರುವಂದನಾರ್ಹರು. ಇವರು ಬ್ರಿಟಿಷ್ ಸರ್ಕಾರದ ಆಡಳಿತ ಮತ್ತು ಸೈನ್ಯಾಧಿಕಾರಿಗಳ ವರ್ಗದಲ್ಲಿ ಬರುವುದಿಲ್ಲ. ಕೇವಲ ತಂತ್ರಜ್ಞಾನ, ಮತ್ತು ಸಂಶೋಧನೆಗಳಲ್ಲಿ ದೇಶದ ಫಸಲುಗಳ ಗುಣಮಟ್ಟವನ್ನು ವರ್ಧಿಸಿ ಭಾರತದ ಪ್ರಗತಿಯನ್ನು ಕಾಣುವುದು ಅವರ ಗುರಿಯಾಗಿತ್ತು ಎನ್ನುವುದು ಗಮನಿಸಬೇಕಾದ ನೈಜ ಸಂಗತಿ.
Comments
ನಮ್ಮ ಮುಂಬೈ ಜನರ ಮಾತಿನಲ್ಲಿ
In reply to ನಮ್ಮ ಮುಂಬೈ ಜನರ ಮಾತಿನಲ್ಲಿ by venkatesh
ಸ್ಥಾಪಕರ ದಿನಾಚರಣೆ ಮಾಡಿದೆವು.