ಹನಿಗಳು ಒಂದಿಷ್ಟು...
ಕವನ
ಮಧುವನದ
ತುಂಬೆಲ್ಲಾ ಸವಿಯೊಲುಮೆ
ಈಕೆಯಿದ್ದಳು !
ಜೀವನದಲ್ಲಿ
ಜೀವ ಕೈಯಲ್ಲಿಡಿದು
ಏಣಿ ಹತ್ತಿದೆ !
ಉಪ್ಪಿರದಿಹ
ದೇಹದಲ್ಲಿ ಖಾರವೇ
ಹುಳಿಯೆಲ್ಲಿಯೋ ?
ಅಪ್ಪುಗೆಯಲ್ಲಿ
ಮನೆಯನ್ನೇ ಮರೆತೆ
ಪರರ ಕೂಡಿ !
***
ಹೀಗೆ - ಹೀಗೆಯೆ
ತಪ್ಪನ್ನು ತಪ್ಪು ಅನ್ನುವುದರಲ್ಲಿ ತಪ್ಪಿಲ್ಲ,
ಆದರೆ ತಪ್ಪೇ ಇಲ್ಲದ ವಿಷಯಗಳನ್ನು ತಪ್ಪು
ಅನ್ನುವುದು ಮಹಾ ತಪ್ಪು.
ಹಾಗೆನ್ನುವವರ ಸಂಕುಚಿತ ಮನೋಭಾವನೆಯನ್ನ
ಅದು ತೋರಿಸುವುದರ ಜೊತೆಗೆ ಆ ವಿಷಯಗಳಲ್ಲಿ
ತಾನು ಪರಿಪೂರ್ಣನಲ್ಲವೆಂಬುವುದನ್ನೂ ತೋರಿಸಿಕೊಡುತ್ತದೆ.
***
ಮುಕ್ತಕ
ತನುವಿನೊಳು ಸೊಗಸಿಹುದು ಎಂದೆನುತ ನಲಿಯದಿರು
ಮನದೊಳಗೆ ಒಲವಿರಲಿ ತಿಳಿಯೆನ್ನ ಕೂಸೆ |
ಜನಬಲವು ಇದೆಯೆಂದು ಸುವಿಚಾರ ಕಲಿಯದಿರೆ
ನನಸದುವು ವಿಷವಕ್ಕು -- ಛಲವಾದಿಯೆ ||
***
ಕಾರಣರು
ಸ್ವಾತಂತ್ರ್ಯ
ಸಿಕ್ಕ ನಂತರ
ಭ್ರಷ್ಟಾಚಾರದ
ಬೇರುಗಳು
ಆಳವಾಗಿ
ಈ ದೇಶದಲ್ಲಿ
ಹಬ್ಬಿದ್ದು
ಹಳ್ಳಿಯಿಂದಲ್ಲ
ಡೆಲ್ಲಿಯಿಂದ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್