ಹನಿಗಳು ಬಿದ್ದಾಗ...
ಕವನ
ಆದಿ ಅಕ್ಷರ
ಬಳಸಿ ಬರೆದರೆ
ಕವನವೇನು ?
ಮಾತು ಕತೆಯೆ
ನಮ್ಮ ನಿಮ್ಮೊಳಗೆ
ಕತೆಯಾಗದೆ ?
ಹುತ್ತ ಹಾವಿನ
ಸುತ್ತ ಕವನ ಬರೆ
ಕವಿಯಾಗುವಿ !
ಪ್ರತಿ ನಿಯಮ
ಮನುಷ್ಯನೆದೆಯನು
ಸೀಳ ಬಾರದೆಂದೆಂದೂ !
ಉಪ್ಪರಿಗೆಲಿ
ಕುಳಿತ ಹುಡುಗಿಯು
ನೆಲ ನೋಡುವಳೇನು !
ಕನಸನಿನಲಿ
ಬಂದ ಹುಡುಗನು
ನನಸಿಗೆ ಬಾರನೆ !
ಕಥೆಯಲ್ಲಿಯ
ಜೀವನದಂತೆ ನಮ್ಮ
ನಿಜ ಬದುಕಲ್ಲವೊ !
ಕೇಶವನಲಿ
ಬೇಡಿಕೊಳ್ಳುವ ಮುಂಚೆ
ಶುದ್ಧನಾಗಯ್ಯಾ !
ದೇವನಿಹನು
ಬೆರೆತು ಎಲ್ಲರೊಳು
ತಿಳಿದಿಲ್ಲವೆ !
ಕರಡಿ ಧ್ವನಿ
ಘರ್ಜನೆಗಿಂದು ಹುಲಿ
ಇಲಿಯಾಯಿತು !
ಚಪ್ಪೆ ಸೋಡವೂ
ಬೇಕಾಗುತ್ತದೆ ನೋಡು
ಹೊಟ್ಟೆ ನೋವಿಗೆ !
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್