ಹನಿಗಳು ಮತ್ತು ಒಂದು ಗಝಲ್

ಹನಿಗಳು ಮತ್ತು ಒಂದು ಗಝಲ್

ಕವನ

ಲೋಕದ ಜನ

ಡೊಂಕೆನ್ನದಿರಿ

ನಮಗೆ ನಾವೇ

ಡೊಂಕು ಬಾಳಲಿ !

 

ಕೊಡು ಬೆಳಕ 

ಕರ್ಪೂರದಂತೆ,ಈಶಾ

ಜಗದೊಳಗೆ !

 

ಕಾಮ ಜ್ವರಕೆ

ಮದ್ದಿಲ್ಲವೊ ನೀ ತಿಳಿ

ಸಂನ್ಯಾಸಿಯಾಗೊ !

 

ಉಣ ಬಡಿಸು

ಉತ್ತಮವಾದ ಊಟ

ಕವನದಂತೆ !

 

ಕಾಸು ಇದ್ದರೆ

ಈಗಿನ ಜನರಂತೆ

ಎರಗ ಬೇಡ !

 

ಕೋಟು ಧರಿಸು

ವಾದವ ಮಾಡುತಲೆ

ನ್ಯಾಯ ಕೊಡಿಸು !

***

ಗಝಲ್

ದೇಹವು ಹೀಗೆಯೇ ಸೊರಗಿ ಹೋಗದು ಗೆಳೆಯ

ಮನಸು ಹಾಗೆಯೇ ಕರಗಿ ಬೀಳದು ಗೆಳೆಯ

 

ನೀನೆಂದ ಮಾತ್ರಕ್ಕೆ ಹೃದಯ ಕೊಡಲೇ ಒಲವೆ

ವಂಚಿತ ಬದುಕು ಯಾವತ್ತೂ ಬೇಡದು ಗೆಳೆಯ

 

ಚಿಂತನೆ ತರುವ ದಿನವೂ ಮುನ್ನುಡಿ ತಾರದೆ

ಚಿಂತೆಯ ಜೊತೆಗೆ ಭಾವನೆ ಸೇರದು ಗೆಳೆಯ

 

ಜೀವನ ಯಾತ್ರೆಯ ನಡುವೆ ಪ್ರಣಯ ಕೂಡದೆ

ಸುಖವು ಹಾಡುತ ಹೋಗಲು ಕಾಡದು ಗೆಳೆಯ

 

ಹುಣ್ಣಿಮೆ ದಿನವೂ ಹೊಸತು ಕಾಣದೆ ಈಶನೆ

ಸವಿಯ ಕಂಡಿಹ ಬಾಳದು ಚೀರದು ಗೆಳೆಯ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್