ಹನಿಗಳು ಮತ್ತು ಗಝಲ್

ಹನಿಗಳು ಮತ್ತು ಗಝಲ್

ಕವನ

ಪ್ರೀತಿಯಿಂದಲೆ

ಅವಳನ್ನು ಕೇಳಿದೆ

ಕೈಯ ಕೊಟ್ಟಳು !

***

ಮುನಿಸು ಬಿಟ್ಟ

ಮರು ಗಳಿಗೆಯಲ್ಲೆ

ಮುತ್ತು ಕೊಟ್ಟಳು

***

ನನ್ನವಳೆಂದೂ

ಬಾಡದಿರುವ ಹೂವು

ದುಂಬಿಯಾಗಿಹೆ !

***

ಮತ್ತೆ ಉಸಿರು

ಚೆಲ್ಲುವವರಿದ್ದರೂ

ಹಸಿರೆಲ್ಲಿದೆ !

***

ಬದುಕಿನಾಳ

ಅದ್ಭುತ ಸಾಗರವು

ಈಜುತಲಿರು

***

ನದಿಯೊಳಗೆ

ಉಪ ನದಿಗಳಂತೆ

ಬದುಕು ಸಂತೆ

***

ಚರಿತ್ರೆಗಳು

ಮಣ್ಣನ್ನು ಸೇರಿದಾಗ

ಕತೆ ಹುಟ್ಟಿತು

***

ಚರಿತ್ರೆಯಾಳ

ಮನಕೆ ಸಿಲುಕದೆ

ಪಾಠವಾಯಿತು

 ***

ರೋಗಿಗಿಂತಲೂ

ಹಿಡಿಯದವನಿಗೇ

ಮೂರ್ಛೆ ರೋಗವು

***

ಅನುಭವದ

ಅಭಿನಯನದಲ್ಲಿ

ಕಾವ್ಯ ಮಿಂಚಿತು

***

ಗಝಲ್

ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೇ ಗೆಳತಿ

ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೇ ಗೆಳತಿ

 

ಸಂತಸದ ಚೆಲುವಿನಲಿ ರೂಪ ಯೌವನವೇರಿ ಬೋರ್ಗರೆದು ಸಾಗುವುದು ನೋಡು

ಸೌಂದರ್ಯ ಮನಸಿನ ನವಯುಗದ  ಮೋಹದೊಳು ಒಲವು ಕಾಣುವುದೇ ಗೆಳತಿ

 

ಹೃದಯದೊಳಗಿನ ಸವಿಯ ತೆರೆದು ಸಂತಸ ಪಡುತ ಹೊರಟು ಬಂದಿರುವೆನಿಂದು

ಬೆತ್ತಲಾಗಿರುವ ಮನಸ್ಥಿತಿಯ ತನುವಿನಾಳದ ರೂಪದಲಿ ತಿನಿಸ ತಿನ್ನುವುದೇ ಗೆಳತಿ

 

ಕಣ್ಣಿನೊಳಗಿನ ಹನಿಯು ಜಾರುತಿರಲೂ ಸುತ್ತ ತಡೆಯುವರು ಯಾರಿಹರು ಹೇಳು

ಪ್ರೀತಿಯರಳಿದರೂ ಇಂದು ಗುಲಾಬಿಯ ಮುಳ್ಳು ಚುಚ್ಚದೆ ಮಲಗುವುದೇ ಗೆಳತಿ

 

ಸಂಸಾರವೆನ್ನುವ ಸಂತೆಯಲ್ಲಿನ ನಿದಿರಾದೇವಿಯ ಮಡಿಲ ಅಪ್ಪುಗೆಯೆ ಈಶಾ

ಪ್ರೇಮವೆನ್ನುವ ಅಮಲಿನ ಸಂಕೇತದ ಧ್ವನಿಗಿಂದು ಧನಸ್ಸು ಎತ್ತುವುದೇ ಗೆಳತಿ 

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್