ಹನಿಗಳು ಮತ್ತು ಗಝಲ್

ಹನಿಗಳು ಮತ್ತು ಗಝಲ್

ಕವನ

ವೃದ್ಧಿ

ಅರ್ಥ ಆಗದಿರುವ ಬರಹ

ಅರ್ಥ ಆಗದಿರುವ ಜನರ

ನಡುವಿನಿಂದ ದೂರವಿದ್ದರೆ

ಆಯುಷ್ಯ ವೃದ್ಧಿಸುವುದು -- ಛಲವಾದಿಯೆ !

***

ಹನಿಗಳು

ಕಚ್ಚಾಡದಿರು

ಯೋಗ್ಯತೆಯೇ ಇಲ್ಲದೆ

ಪ್ರಶಸ್ತಿಗಾಗಿ !

 

ನನ್ನಿಂದಾಗಿಯೆ

ಕವಿಯು ಬೆಳಗಿದ

ಭ್ರಮೆಯು ತಿಳಿ !

 

ಹೊಲಸೊಂದಿಗೆ

ಗುದ್ದಾಟ ಸಲ್ಲದಯ್ಯ

ದೂರದಲ್ಲಿರು !

***

ಗಝಲ್

ಎಲ್ಲರನ್ನೂ ಪ್ರೋತ್ಸಾಹಿಸುವಂತ ನುಡಿಯೊಂದು ಬೇಕಾಗಿದೆ

ಗೊತ್ತಿರದವರ ಕೊಂಡೊಯ್ಯುವ ನಡೆಯೊಂದು ಬೇಕಾಗಿದೆ

 

ಕನಸಿರದೆ ಹೋದರೆ ಬದುಕೊಳಗೆಂದೂ ನನಸಿಲ್ಲವೇನು

ಎಲ್ಲರಿಗೂ ಮುನ್ನಡೆಯುವ ದಾರಿಯೊಂದು ಬೇಕಾಗಿದೆ

 

ದ್ವೇಷಗಳ ಜೊತೆಯಲ್ಲಿಯೇ ಬದುಕುವುದೂ ಸಾಧ್ಯವೆ

ವಾಸಿಸಲು ಶಾಂತಿಯಿರುವ ಮನೆಯೊಂದು ಬೇಕಾಗಿದೆ

 

ಗಲಭೆಗಳು ಇರುವಲ್ಲಿ ಸೌಹಾರ್ದತೆಯು ಇರುವುದೆ

ಮನುಷ್ಯತ್ವ ಉಳಿದಿರುವ ನೆಲೆಯೊಂದು ಬೇಕಾಗಿದೆ

 

ಕಿಡಿಕಾರುವ ಮಂದಿಗಳಲ್ಲಿ ಒಲವೊಂದಿರಲಿ ಈಶಾ

ನಾವೆಲ್ಲರೂ ಒಂದೆನುವ ನೀತಿಯೊಂದು ಬೇಕಾಗಿದೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್