ಹನಿಗಳು ಮತ್ತು ಮುಕ್ತಕಗಳು

ಹನಿಗಳು ಮತ್ತು ಮುಕ್ತಕಗಳು

ಕವನ

ಬೆನ್ನು ತಟ್ಟಲು

ಬೇರೊಬ್ಬ ಬೆಳಗಿದನು

ನಾನು ಮಂಕಾದೆ !

 

ಗಟ್ಟಿ ಬೆಲ್ಲವೂ

ನೀರಲ್ಲಿ ಕರಗುತ್ತೆ

ದಡ್ಡ ಓದನೇ !

 

ಕ್ಷಯ ಬಂದಿದೆ

ಬಾಳಲ್ಲಿ ಇರುಳಿಂದು

ಸಾವು ಸನಿಹ !

***

ವ್ಯಾಧಿಗಳು

ಅವ ಇವ

ಪಲಾಯನ ವಾದಿ

ನಾನು ಮಾತ್ರ

ಸುಪರ್

ವೇದಿ

ಎನ್ನುವವರು

ನನ್ನ

ಲೆಕ್ಕದಲ್ಲಿ

ಪಲಾಯನ

ವ್ಯಾಧಿಗಳು

ಛಲವಾದಿಯೆ !

***

ಮುಕ್ತಕ

ಮನಸಿಹುದೆ ಮನದೊಳಗೆ ಅರಿಯುತಲೆ ಸಾಗುತಿರು

ಮನವನವ ಶುಚಿಗೊಳಿಸು ಅನುದಿನವು ನೀನು|

ಕನಸೊಳಗೆ ತೇಲುತಲೆ ಜೀವನವ ನಡೆಸದಿರು

ನನಸೊಳಗೆ ಬಾಳುತಿರು -- ಛಲವಾದಿಯೆ||

***

ಮುಕ್ತಕ 

ಮನದೊಳಗೆ ವಿಷಬಯಕೆ ತುಂಬಿಸುತ ಸಾಗಿದರೆ

ಮನವನದ ಹಸಿಯುಸಿರ ಸುಮ ಬಾಡದಿಹುದೆ|

ಮನು ಜನುಮ ಬುವಿಯೊಳಗೆ ದೊಡ್ಡದೆಂದಿಹರಿಲ್ಲಿ

ಮನುಕುಲದ ಪಂಡಿತರು --- ಛಲವಾದಿಯೆ||

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್