ಹನಿಗಳು, ಮುಕ್ತಕಗಳು ಇತ್ಯಾದಿ...

ಹನಿಗಳು, ಮುಕ್ತಕಗಳು ಇತ್ಯಾದಿ...

ಕವನ

ಜಯವಾಗಲಿ

ಕನ್ನಡದ ನಾಡಿದು

ನಮ್ಮೊಲವ ಬೀಡಿದು

ಕನ್ನಡವೇ ಸತ್ಯವು

ಕನ್ನಡವೇ ನಿತ್ಯವು

ಸಿರಿಗನ್ನಡಂ ಗೇಲ್ಗೆ

ಜೈ ಕನ್ನಡಾಂಬೆ !

***

ಹನಿಗಳು

ನಾನು ಕೆಮ್ಮಿದೆ

ಹಿಡಿದು ಕೊಂಡು

ಹೋದರು !

*

ಸತ್ತರೂ

ಜನ

ಒಗ್ಗಟ್ಟಾಗಲಿಲ್ಲ!

*

ತಪ್ಪು

ಒಪ್ಪುಗಳು

ಸವಕಲು ನಾಣ್ಯಗಳು!

*

ಪುಟ್ಟ

ಕೆಲಸಗಳೇ

ದೇಶಕ್ಕೆ ಭವಿಷ್ಯ !

*

ಮರ ಹತ್ತಿದೆ

ಬಿದ್ದೆ

ಆಸ್ಪತ್ರೆ ಸೇರಿದೆ!

*

ಬೆಕ್ಕು

ಏನೂ ಹೇಳದೆ

ಹಾಲು ಕುಡಿಯಿತು!

*

ಉಪ್ಪು ಹುಳಿ ಖಾರ

ತಿಂದ ದೇಹಕ್ಕೆ

ಸೊಕ್ಕು ಜಾಸ್ತಿ!

*

ಬೆಟ್ಟದ ಮೇಲೆ

ದೇವರಿರುವುದೇ

ನಮ್ಮನ್ನು ಗಮನಿಸಲು!

*

ಪ್ರಕೃತಿ

ಮುನಿದಾಗ

ಬದಲಾಗು !

*

ಮತ್ತೆ

ವಸಂತ

ಬರಲಿಲ್ಲ !

*

ನ್ಯಾಯ

ಬಡವರ

ಕನಸುಗಾರ ! 

*

ಚಿಂತೆ

ಹೆಚ್ಚಾದವ

ಚಿತೆಯೇರಿದ ! 

*

ಚಿಂತನೆ

ಹೆಚ್ಚಾದವ

ಬೀದಿ ತಿರುಗಿದ ! 

*

ಬಡವರ

ಅಕ್ಕಿಯಲ್ಲಿ

ಕಲ್ಲು ಹುಳ ಹುಪ್ಪಡಿ ! 

*

ಬರಹಗಾರ

ಕತೆಯಾದಾಗ

ಸ್ಮಶಾನದಲ್ಲಿದ್ದ !

*

ನಾನು

ಎನ್ನುವಲ್ಲಿ

ನಾವೆನ್ನಿ !

*

ನಾನು

ಎನ್ನುವುದೇ

ಸಾವು !

*

ನನ್ನ ನಲ್ಲೆಯೇ

ನನ್ನ ಬದುಕು

ನನ್ನ ಬೆಳಕು !

***

ಹೌದಲ್ವಾ

ಕವಿ

ಕವಿಗಳನ್ನೇ

ಮೆಚ್ಚದಿದ್ದರೆ

ಕಿವಿಗಳು

ಹೇಗೆ

ಮೆಚ್ಚಿಯಾವು

ಛಲವಾದಿಯೆ !

***

ಮುಕ್ತಕ

ಕೋಮಲೆಯೊ ಮಂಗಳೆಯೊ ಚೆಲುವಿನಲಿ ಬಂದಿರಲು

ಕಾಮನೆಯ ಜೊತೆ ಜೊತೆಗೆ ಸಂಸಾರ ನಡೆಸು|

ಮಾನಬಹುಮಾನಗಳ ರುಚಿಹಿಡಿದು ಸಾಗಿದರೆ

ತಾಮಸವು ಮನದೊಳಗೆ --- ಛಲವಾದಿಯೆ||

***

ತಪ್ಪುಗಳು ಬರದಿರದು ಪಾಠಗಳ ಕಲಿವಾಗ

ತಪ್ಪ ತಿದ್ದುತ ಬದುಕೊ ಬುವಿಯೊಳಗೆ ನೀನು|

ಒಪ್ಪತನ ನಿನ್ನಲ್ಲಿ ಜೊತೆಯಾಗಿ ಬೆಳಗಿದರೆ

ಬೆಪ್ಪನಾಗದೆಯಿರುವೆ --- ಛಲವಾದಿಯೆ||

***

ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್