ಹನಿಗಳು ಸರ್, ಹನಿಗಳು !

ಹನಿಗಳು ಸರ್, ಹನಿಗಳು !

ಕವನ

ತರ್ಕ

ವಿಜ್ಞಾನದಲಿ

ತರ್ಕಗಳು

ಗೆಲ್ಲಬಹುದು...

ಜೀವನದಲಿ

ತರ್ಕಗಳು

ವಿತರ್ಕಗಳಾಗಿ

ಬಿಡುತ್ತವೆ!

***

ಹೀಗಲ್ಲ;ಹಾಗೇ...

ಅದು ಹೀಗೇ

ಆಗಬೇಕೆಂದೆ...

'ನಾನು ಹಾಗೇ

ಆಗುವುದು'

ಎಂದು ಹೇಳಿದ

ಅಶರೀರವಾಣಿ

ನಕ್ಕು ಮತ್ತೆ ಕೇಳದೆ

ಮರೆಯಾಯ್ತು!

***

ಕೋಡು

ಹಿರಿಯನೆಂಬ

ಎನ್ನ ಕೋಡುಗಳ

ಸವರಿ ಸಲಹೆ

ಹೇಳುವುದ

ನಿಲ್ಲಿಸಿ ಬಿಟ್ಟೆ....

 

ಬೋಳಾದ

ಎನ್ನ ತಲೆಯ

ನೋಡಿದ ಜನ

ಎನ್ನ ಬುದ್ದನಂತೆ

ಗೌರವಿಸಿದರು!

***

ಮಾರ್ಚ್ 21

ಓ ವಿಶ್ವಕವಿತೆಯ

ದಿನವೇ...

ನಿನಗಿದು ಗೊತ್ತೇ...?

ಕನ್ನಡದ

ಮಲೆನಾಡಿನ

ಕೋಗಿಲೆಯೊಂದು

ವಿಶ್ವ ಮಟ್ಟದ

ಕವಿ ಚಕ್ರವರ್ತಿಯಾಗಿ

ಮೆರೆದು

ಹಾಡಿದುದಂ...

ಅದೇ ಪುಟ್ಟಪ್ಪನೆಂಬೋ

ಮಹಾ ದೊಡ್ಡ

ಕಾವ್ಯ ವೃಕ್ಷ- 

ದೊಡ್ಡಪ್ಪನಂ;

ರಾಷ್ಟ್ರಕವಿಯಾಗಿ

ಮೆರೆದುದಂ...?

ನನ್ನದಿದೋ 

ಮಹಾ ಪ್ರಣಾಮಮಂ

ಅವರಿಗೆ;

ಜೊತೆಗೆ ನಿನಗೆ!

***

ಸಂಸ್ಕೃತಿ

ನಿನ್ನಾಳದ

ಯುಗಾಂತರದ

ಬೇರುಗಳ

ನಾ ನೋಡಲು

ಸಾಧ್ಯವೇ 

ಓ ಸಂಸ್ಕೃತಿ....

 

ನಿನ್ನ ಮುಂದೆ

ನಾನೊಬ್ಬ

ಅಲ್ಪಾಯುಷಿ;

ನಿನಗೆ ಶರಣೆನ್ನುವುದೊಂದೇ

ನನಗಿರುವ

ಅಲ್ಪಮತಿ!

***

ಸತ್ಯ-ಮಿಥ್ಯ

ಸೋಜಿಗದ ಜಗವಿದು

ಈ ಜಗದಲಿ

ಸತ್ಯವಾವುದು

ಮಿಥ್ಯವಾವುದು

ಎಂಬ ತಥ್ಯವೇ

ಅರ್ಥವಾಗುತಿಲ್ಲ....

 

ಅವನಿಗೆ ಸತ್ಯವಾದುದು

ಇವನಿಗದು ಮಿಥ್ಯ

ಇಲ್ಲಿ ಯಾವುದು ಪಥ್ಯ?

ಕಾಲದ ಮಹಿಮೆಯೋ

ಸ್ಥಳದ ಮಹಿಮೆಯೋ

ಆ ದೇವರೇ ಬಲ್ಲ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್