ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಸೌಂದರ್ಯವೆಂದೂ

ಬಾಳಿಗೊಂದು ವರವು

ಅನುಭವಿಸು !

*

ಮತ್ತೆ ಮೌನದ

ಜೊತೆಗಾರನ ಜೊತೆ

ಸಾಗುತ್ತಿದ್ದೇನೆ

*

ತಪ್ಪುಗಳಲ್ಲೂ

ಪ್ರಶಸ್ತಿ ಪತ್ರಗಳ

ಪಡೆಯುತ್ತಾರೆ

*

ಎಷ್ಟೇ

ಎತ್ತರ

ಕ್ಕೆ

ಏರಿ

ರೂ

ಒಂದು

ಸಮಯ

ಲ್ಲಿ

ಕೆಳಗೆ

ಜಾರ

ಲೇ

ಬೇಕು !

*

ಮುಖ 

ಕ್ಷೌರಕ್ಕೆ

ಹಲವರು

ಸೆಲೂನ್

ಗೆ

ಹೋಗುತ್ತಾರೆ!

ಕೃತಿ

ಚೌರ್ಯಕ್ಕೆ

ಮಸ್ತಕ

ತೆರೆಯದೆ

ಕೆಲವರು

ಹಲವರ

ಪುಸ್ತಕ

ಹುಡುಕುತ್ತಾರೆ !!

*

ಭಾವನಾತ್ಮಕ

ಸಂಬಂಧವು

ನಮ್ಮ ನಡುವಿನ

ಬುದ್ಧಿವಂತಿಕೆಯ

ಮೆಟ್ಟಿಲುಗಳು !

*

ಈಗಿನ ಸಾಹಿತ್ಯದ

ಮಜಲುಗಳೇ

ಹೀಗೆ !

ಹೇಗೆಂದರೆ ?

ರಾವಣ

ವೇಷಧಾರಿ

ಚೌಕಿಗೆ

ಬರುವ

ಮೊದಲೇ

ಕೆಳಗೆ ಕೂತವರು

ಮನೆಗೆ

ಹೋದ

ಹಾ

ಗೆ !!

*

ನಮ್ಮ

ನರ ನರಗಳಲ್ಲಿ

ಇರುವು

ದೇ

ಹಿಂದೂ

ಸಂಸ್ಕೃತಿಯು !

ಆದರೂ

ಧರ್ಮ - ಕರ್ಮಗಳ

ಅರಿಯ

ದೇ

ನಾವೇಕೆ

ಹಿಂದು !!

*

ಮೋಡ ಕರಗಿ

ಮಳೆ ಬಂತು

ಹುಡುಗಿ ತಬ್ಬಿ

ಸುಖ ತಂತು !

*

ಸಿಹಿ ನೀರಿನ

ತಳದಲ್ಲಿ

ಉಪ್ಪು ನೀರಿನ

ಸಂಗಮ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್