ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ನೀ

ಬಾರೋ

ಬಳಿಗೆ

ಕೈಹಿಡಿದು

ಅನುದಿನವು

ಕಾಪಾಡುಯೆಂದೆಂದೂ

ಮುದದಿ ಸೆಳೆಯುತ

ಒಲವಿನಲಿ ಮುದ್ದಿಸೆ

ಬೆಸುಗೆಯಿಂದಲಿ ತಬ್ಬುತ

ವಿರಹವನು ಮರೆಸುತಿರು

ನಾನು ನೀನಾಗುತಲೆ ಬದುಕಿಂದು

ನೀನು ನಾನಾಗುತಲೆ ಸವಿಯಾಗೆಂದೂ

ಚೆಲುವು ಮೂಡುತಲೆ ರಾಗವು ಹೊಮ್ಮಿದೆ

ಹರುಷವು ಕಾಣುತಲೆ ಪ್ರೀತಿಯರಳಿದೆ

ಜೀವನದೊಳು ಉಲ್ಲಾಸವದು ಮಿನುಗುತಲೆ

ಹೊಸತು ಜೀವವು ಉದಯಿಸಿತು ಒಡಲೊಳಗೆ !

***

ನಾನು

ಬರೆ

ಸುಂದರ

ಭಾಮಿನಿ

ಗೆ

ನನ್ನವಳು

ಕಾ

ಮಿನಿ

ಹೇಳುವುದೇನು

ಈಗ

ನಮ್ಮ

ಜೊ

ತೆ

ಗೆ

ಎರಡು

ಮಿಣಿ

ಮಿ

ಣಿ !

***

ಹುಟ್ಟು

ಸಾವುಗಳ

ನಡುವೆ

ಡೋಲು

ಕ್ಕೆ

ಇಲ್ಲದ

ಡೊಂಬರಾಟ

ನಮ್ಮ

ದು !

***

ಕಾಮವೇ

ಹೀಗೆ

ಹೇಗೆಂದರೆ ?

ಹರೆಯ

ಲ್ಲಿ

ಸಂಶೋಧನೆ

ಪ್ರಚೋದನೆ!

ನಡು

ವಯಸ್ಸಿನಲ್ಲಿ

ಆಟ

ಪೇಚಾಟಗಳ

ನಡುವೆ

ಸಂಸಾರ

ನಿಭಾವಣೆ !

ಹರೆಯ

ಕಳಚಿದಾಗ

ಕಾಲ್

ನ್ನೆ

ಕಣ್

ಸನ್ನೆ

ಕೊನೆಗೆ

ಗೋರಿಯೊಳಗೆ

ಹಾಯಾಗಿ

ನಿದ್ದೆ !!

***

ಹಣವೆಂಬ

ವೈರಸ್ಸ್

ನಲ್ಲೆ

ಮುಳುಗಿದ್ದ

ಜನ

ಕ್ಕೆ

ವೈರಸ್

ಅಂತಹ

ಕಾಯಿಲೆಗಳು

ಬಂದದ್ದು

ಗೊತ್ತಾ

ಲೇ

ಇಲ್ಲ

ಛಲವಾದಿಯೆ !

***

ಗೊತ್ತಿಲ್ಲದವನಿಗೆ

ನಿಮ್ಮಲ್ಲಿರುವ

ಪ್ರತಿಭೆಯನ್ನು

ಧಾರೆಯೆರೆಯಿರಿ

ಅದಬಿಟ್ಟು  ಬರಿದೆ

ಅಪಮಾನ ಮಾಡದಿರಿ

ಛಲವಾದಿಯೆ !

***

ತರುಣಿಯ ನೋಡಿದ ಜನಗಳ ನೃತ್ಯಂ

ಬರುವರೆ ತಾವ್ ಕುಣಿದಾಡುವ ಸತ್ಯಂ

ಸುಖದಾಟದ ಸೋಲುಗಳೇ ಸಾಗೈ

ಸುಖದಾ ಕೂಟವು ಕರಗುತ ಮರುಗೈ

***

-ಹಾ ಮ  ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್