ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೋ

ನನ್ನ  ಸಮನಾಗಿ ಬೆಳೆದು ನಿಲ್ಲುತ್ತಾನಲ್ಲ ಎಂಬ ಭ್ರಮೆ ಬೇಕೋ

***

ಉಣ ಬಡಿಸು

ಉತ್ತಮವಾದ ಊಟ

ಕವನದಂತೆ !

***

ಕಾಸು ಇದ್ದರೆ

ಈಗಿನ ಜನರಂತೆ

ಎರಗ ಬೇಡ !

***

ಕೋಟು ಧರಿಸು

ವಾದವ ಮಾಡುತಲೆ

ನ್ಯಾಯ ಕೊಡಿಸು !

***

ಹೊಸ ವಿಷಯಕ್ಕೆ ಹುಟ್ಟುತ್ತ ಸಾವು

ಮನಸ್ಸು ಮಾಡದೆ ಬರುತ್ತದೆ ನೋವು

ಯಾರಲಿ ಹೇಳಲಿ ಚಿಂತೆಗೆ

ಬಳಸಿ ಹೋಗುವ ಮಂದಿಗೆ 

ಮಾತಿನ ಮಂಟಪ ಕಟ್ಟುವ ಜನವು

***

ಮುಕ್ತಕ

ಸವಿಗನಸು ಇರಲಿರಲಿ ಬದುಕಿನಲಿ ಎಂದಿಗೂ

ಸುವಿಚಾರ ಖುಷಿಕೊಡಲಿ ಬಾಳಿನಲಿ ನಿನಗೆ |

ಬುವಿಯಲ್ಲಿ ಬೇಸರವ ತರಿಸದಿರು ಜನರೊಳಗೆ

ಭುವನೇಂದ್ರ ನೀನಪ್ಪೆ --ಛಲವಾದಿಯೆ ||

***

ಗಝಲ್

ಪ್ರೇಮವು ಎಂದಿಗು ಬಾಡದು ಗೆಳತಿ

ಪ್ರೀತಿಯು ದ್ವೇಷವ ಬೇಡದು ಗೆಳತಿ

 

ಹೊಳೆವ ಕಣ್ಣದು ಸೊರಗಿದೆ ಏತಕೆ

ರಶ್ಮಿಯ ಚೆಲುವಿನ ಬೀಡದು ಗೆಳತಿ

 

ದಾರಿಯ ದಿಕ್ಕನು ದೂರದೆ  ಸಾಗು

ಕಾರುವ ಉತ್ತರ ಕೂಡದು ಗೆಳತಿ

 

ಗೌಜಿಯ ಗದ್ದಲ ಸುತ್ತಲು ದ್ವೇಷವು

ಒಲವದು ಇರದಿಹ ಸೇಡದು ಗೆಳತಿ

 

ಹೊಟ್ಟೆ ತುಂಬಲು ಶಕ್ತಿಯು ಈಶಾ

ಮುಂದೆ ಬದುಕಿಗೆ ಕಾಡದು ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್