ಹನಿಗಳು ಸರ್ ಹನಿಗಳು !
ಕವನ
ಕವಿತೆ
ಯೇ.....
ಎಂದರೆ
ಅವ
ಕವಿಯೇ ?
ಅದೂ
ಕಾಡು
ಹರಟೆಯೇ !
***
ಮುಕ್ತಕ
ಮನದೊಳಗೆ ಸವಿಯಿರಲಿ ಬೇಸರವು ಬರದಿರಲಿ
ಕನಸಿನಲಿ ನನಸಿರಲು ಒಲುಮೆಯೊಳು ಬಲವು |
ತನನ ತಾನನ ಎನುತ ಜೀವನದ ತಿರುಳಿರಲು
ಮನೆಯೊಳಗೆ ಚೆಲುವ ಸೆಲೆ -- ಛಲವಾದಿಯೆ||
***
ಮಾದಕವು ಬದುಕಿನೊಳು ಇರುವಂಥ ಸತ್ಯವದು
ಕಾದ ಸಲಿಕೆಯ ರೀತಿ ತಿಳಿಯಯ್ಯ ಗೆಳೆಯ|
ಬಾಧೆ ಪಡುತಲೆ ಸಾಗೆ ಸಂಕಟವು ನಿನಗೆಂದು
ವಾದ ಮಾಡಲು ಬೇಡ -- ಛಲವಾದಿಯೆ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
