ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಪ್ರಶಸ್ತಿಯಿಂದ

ಒಬ್ಬ ವ್ಯಕ್ತಿ

ಸಮಾಜದಲ್ಲಿ

ಬೆಳೆಯುತ್ತಾ

ಹೋಗಬೇಕೇ

ಹೊರತು

ಕಳೆದು ಹೋಗ

ಬಾರದು !

*

ನಾವೆಲ್ಲಾ ಒಂದೇ

ಎನ್ನುವವರ 

ಬಾಯಲ್ಲೆಂದೂ

ಹಳಸಿದಂತಹ

ಮಾತು

ಬರುವುದು

ತರವೆ ?

*

ಜಾತಿ ಜೀವಂತ

ಇದ್ದರೇನೇ

ರಾಜಕೀಯ ಉಳಿವುದು

ಬೆಳೆವುದು

ಬೇಳೆ

ಬೇಯಿಸಿಕೊಳ್ಳುವುದು !

ನಡುವೆ

ಉಳಿವನಯ್ಯಾ

ರಾಜಕಾರಿಣಿ !

*

ನಾವು

ಕತೆ ಕವನ

ನಾಟಕ

ಕಾದಂಬರಿ

ಬರೆಯುತ್ತೇವೆ !

ಕೊನೆಗೆ

ನಾವೇ

ಒಂದು

ಕತೆಯಾಗಿ

ಹೋಗುತ್ತೇವೆ !!

*

ಕನಸುಗಳಿಂದು ಬೀಳುತ್ತಿಲ್ಲವೆಂದರು

ನನಸುಗಳ ನಡುವೆ ಓಡಾಡಿದರು

ಬೇಕಾದುದನೆಲ್ಲ ಪಡೆಯುತ್ತಲೆ ಸಾಗಿ

ಐಷಾರಾಮಿ ಬಾಳಿನಲ್ಲೆ ಬದುಕಿದರು !

*

ವಂಶದ 

ಬೆಳವಣಿಗೆಗೆ 

ಮಗುವಿಂದು 

ಬೇಡ !

ಕಾರಣ ?

ಈಗಿನವರಿಗೆ

ಮದುವೆಯೇ

ಬಂಧನ !!

*

ಬಹು ಮಹಡಿಯನು

ಕಟ್ಟಿ ಮೆರೆಯುವಾಗ

ಬೀದಿ ಬದಿಯಲಿಹ

ಜನ ದೂರವಾದರೊ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್