ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಆಸ್ತಿ -- ಅಸ್ಥಿ

ಎಲ್ಲರೂ ಕನ್ನಡದ ಆಸ್ತಿ

ಅದಕ್ಕೆಂದು ತೋರುತ್ತದೆ

ಬೆಳಗಾಂ ಮಹಾರಾಷ್ಟ್ರಕ್ಕೆ

ಕಾಸರಗೋಡು ಕೇರಳಕ್ಕೆ

ನಡುವೆ ಉಳಿದಿರುವ 

ಕನ್ನಡದ ಸ್ಥಿತಿ ಎನ್ನಡಾ

*

ಸ್ವಾ-- ಹಿತ

ಬಹುಜನರ ಸ್ವಾ ಹಿತಕ್ಕೆ

ಬಲಿಯಾಯ್ತೆ ಸ್ವಾತಂತ್ರ್ಯ 

ಸಿರಿವಂತಗೆ ಮಾತ್ರ ಇಹುದೆ ಸ್ವಾತಂತ್ರ್ಯ 

ಬಡತನದ  ಲೋಕದೊಳು

ಬಾಳುವುದೇ ಸ್ವಾತಂತ್ರ್ಯ

ಈ ಮಣ್ಣ ನೆಲದೊಳು ಇಹುದೆ ಸ್ವಾತಂತ್ರ್ಯ

*

ಕೊಂದವರು

ಆನೆ ಕೊಂದವರು ನಾವು

ಎಂದವರು ಯಾರೊ

ಕೊಂದವನು ಎಲ್ಲಿಹನೊ ಎಂದನೊಬ್ಬ

ಹಾಗಾದರೆ ಹೇಗೆನುತ

ಆನೆಯನ್ನೇ ಕೇಳೋಣವೆಂದರೆ

ಆನೆ ಸತ್ತು ಮಲಗಿದೆ ನೆಲದೊಳಗೆ ಸುಬ್ಬ

*

ಮುನ್ನುಡಿ

ಬರಹಗಳ ಮುನ್ನುಡಿಗೆ

ಹೋಗ ಬೇಡಲೋ ತಮ್ಮಾ

ಹೊರಟೆಯಾದರೆ ನಿನಗೆ ನೋವೆ ಗತಿಯು

ತಿಳಿದಿದೆಯೋ ತಿಳಿಯದೆಯೊ

ಸುಮ್ಮನಿರು ಸಾಕಿನ್ನು 

ಬೇರೆಯವರ ಉಸಾಬರಿ ಬಾಳೆ ವ್ಯಥೆಯು

*

ಮಕ್ಕಳಾಗಲು

ಮಕ್ಕಳಾಗಲು ಇಂದು

ಮದುವೆ ತಾಳಿಯು ಬೇಡ

ಸಂಸಾರ ಸುಖವಂತೂ  ಬೇಡವೆನುತಿ

ಗಂಡು ಹೆಣ್ಣಿನ ಸನಿಹ

ಒಂದೇ ಕೋಣೆಯಲಿದ್ದು

ಕೇಳಿಯಾಟದ ಮದದಿ ಬಸುರಿ ಬಾಳಂತಿ

*

ಹೇಳುವರು

ಮದುವೆ ದಿನ ಹೇಳುವರು

ನಾವಿಬ್ಬರೂ ಒಂದೆ

ತಿಂಗಳಾಗುತ ಬೇರೆ ಬೇರೆಯಾಗುವರು

ಇದಕ್ಕಾಗಿ ಬೇಕಿತ್ತೆ

ಮದುವೆ ಎನ್ನುವ ಮಧುವು

ತಂದೆ ತಾಯಿಯ ಗೋಳು ಕೇಳುವವರಾರು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್