ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಬೆಂಕಿಯಂತೆ

ಉಗುಳುವುದೇ

ಸಾಹಿತ್ಯವಲ್ಲ

ಬೆಂಕಿಯಲ್ಲೇ

ಇರುವವರನ್ನು

ಮತ್ತೆ

ಅರಳುವಂತೆ

ಮಾಡುವುದೇ

ನಿಜವಾದ

ಸಾಹಿತ್ಯದ

ಕೆಲಸವಾಗಬೇಕು !

 

ಮಾತು ಉದುರಿ

ಮುತ್ತಾಗಬೇಕು ನಿಜ

ಹೊಲಸಾಗದೆ ! 

***

ಮುಳುಗಿರುವ 

ಸೂರ್ಯ, ಉರಿದುರಿದು

ಕಣ್ಮುಚ್ಚಿದಜ್ಜ ! 

***

ಒಬ್ಬ ನೆಟ್ಟಾಗ

ಇನ್ನೊಬ್ಬ ಕಡಿಯುತ್ತಾ

ಹೋಗುತ್ತಾನೆ !

***

ಮನುಷ್ಯ ಹೀಗೆ

ಹೇಗೆಂದರೆ ಸತ್ತಾಗ

ಸ್ಮಶಾನ ವಾಸಿ !

***

ಸತ್ಯ ಸತ್ತಿತೆ

ಜಗತ್ತಿನ್ನೆಲ್ಲೆಡೆಗೂ

ಮಿಥ್ಯೆ ಮೆತ್ತಿದೆ !

***

ಮುಖವಾಡದ

ಮಗದೊಂದು ಹೆಸರೇ

ನರ ಸತ್ತವ !

***

ಪತಿಯ ಒಂದು 

ಹೂ ನಗು

ಸವಿ ನುಡಿಗೆ 

ಸತಿಯ

ಆಗಮನ

ಭಿರು ಮಾತಿನ 

ಕಾಳಗಕ್ಕೆ

ನಿರ್ಗಮನ 

ಛಲವಾದಿಯೆ !

***

ಕವಿಯು

ಪೂರ್ಣ

ಚಂದ್ರನಂತೆ

ಹೊಳೆದಾಗ

ತಾರೆಯು

ಹತ್ತಿರ

ಬಂದಳು

ಛಲವಾದಿಯೆ ¡

***

ಹೀಗೆಯೇ ಬದುಕೆಂದು 

ಹೇಳಲು ಬರುವುದಿಲ್ಲ

ಒಮ್ಮೆ ಗೆಲುವು ಒಮ್ಮೆ ಸೋಲು

ಮತ್ತೆ ಸೋಲಿನಲ್ಲಿ ಗೆಲುವು

ನಡುವೆ ಅಂಕದ ಪರದೆ 

ಎಳೆಯುವುದು !

ಮತ್ತೊಮ್ಮೆ ಹರಿದ

ಪರದೆಗೆ ತೇಪೆ ಹಾಕಿ

ಮಗದೊಮ್ಮೆ ಜೀವನ ನಾಟಕ

ಮುಂದುವರೆಸಿದ ಹಾಗೆ

ಹೀಗೆಯೇ ಬದುಕೆಂದು

ಹೇಳಲು ಬರುವುದಿಲ್ಲ !!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್