ಹನಿಗಳು ಸರ್ ಹನಿಗಳು !
ಕವನ
ಜನ್ಮವಿದ್ದರೆ
ನನಸಾಗುವಿರೇನು
ಕನಸುಗಳೆ !
*
ತಪ್ಪುಗಳನ್ನು
ಮಾಡದಿರಿ ಜನರೆ
ಕ್ಷಣಿಕವದು !
*
ಮುತ್ತುಗಳಲ್ಲಿ
ಮನ ತೆರೆಯುವಂಥ
ಗುಣವಿಹುದು !
*
ಚಿಂತೆಯಿರದ
ಮನದೊಳಗೆಯೆಲ್ಲ
ಸಾಂತ್ವನವಿದೆ !
*
ದೊಡ್ಡ
ಮನುಷ್ಯರ
ಸಹವಾಸ
ಮಾಡುವಾಗ
ನಾವು
ದಡ್ಡ
ಮನಸ್ಸಿನಲ್ಲಿ
ಇರಬೇಕು !
*
ಪ್ರಯೋಗಗಳ
ನಡುವೆಯೇ ಚಿಗುರಿ
ಹೆಮ್ಮರವಾಗು !
*
ಪ್ರಯೋಗವದು
ಇರದೊಡೆ ಸಾಹಿತ್ಯ
ನಿಂತ ನೀರದು !
*
ಬರೆದಂತೆಯೇ
ಕವಿಯಾಗಲಾರನು
ಕಲಿಯಬೇಕು !
*
ಮೀಟರ್ ಬೇಕು
ಎಂದವರ ಸಾಹಿತ್ಯ
ಸೊರಗಿಹುದು !
*
ಗುಲ್ ಮೊಹರಿನ
ನಡುವೆ ಕನ್ನಡವು
ಕಾಣೆ ಗೆಳೆಯಾ !
*
ಉರ್ದು ಗುಣವ
ಇಟ್ಟು ಬರೆದ ಗಝಲ್
ಕನ್ನಡ ಸ್ವತ್ತಲ್ಲ !
*
ಕಾವ್ಯನಾಮವು
ಕವಿ ಕಾವ್ಯದ ಸೊತ್ತು
ತೆಗಳ ಬೇಡ !
*
ಮನದೊಳಗೆ
ಇರಲಿ ಪ್ರೀತಿಯದು
ಸಾವ ತನಕ !
*
ಪುಟ್ಟ ಕೈಯಲ್ಲಿ
ಹಿಡಿಸ ಬೇಡಿರದು
ಹಿಡಿಸೂಡಿಯ !
*
ಮರೆತವರು
ಮತ್ತೊಮ್ಮೆ ಬಂದಾರೆಂದು
ಕಾಯುತ್ತಿರುವೆ!
*
ಬೆರೆತವರು
ಎಲ್ಲಿಹರೊ ಕಾಣೆನು
ಓಡಿ ಹೋದರೊ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್