ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಮಣ್ಣು ತಿನಿಸುವ ಕೆಲಸ ಸಾಹಿತ್ಯದಲಿ ಕೂಡದು

ಇನ್ನೊಬ್ಬರ ಶ್ರಮವನು ತನ್ನದೆನ್ನುವುದು ಬೇಡದು

ಸಾಹಿತ್ಯ ಸೇವೆಯೊಳು ತುಂಬಾ ಸ್ವಾರ್ಥವದು ತುಂಬಿದೆ

ಹೀಗಾದರೆ ಚೆಲು ಬರಹ ಸಾಹಿತ್ಯದಲಿ ಮೂಡದು

***

ಸುಂದರ ನೋಟದ ವಸ್ತುವಿನಲ್ಲಿ

ವಿಷದ ಮುಳ್ಳನು ಗಮನಿಸಲ್ಲಿ 

ಸವಿ ಇದೆಯೆಂದು ಹೋದೆಯೋ 

ಹೊರಳುತ ಬದುಕುವೆ ಕೇಳಲ್ಲಿ 

***

ಅರ್ಥವಿಲ್ಲದ ಬರಹ ಬರೆದು ಪ್ರಯೋಜನವೇನು

ಚಪ್ಪೆ ಸಾರಿನ ರೀತಿ ಎನುವುದು ಓದುಗನಿಗಾಗದೇನು

ತಿಳುವಳಿಕೆ ಇದ್ದರೂ ಇಲ್ಲದಂತೇ ಬರೆವುದು ತರವೇನು

ಗದರಿಸಿ ಹೇಳಲು ಅವರೇನು ನಮಗಿಂತ ಚಿಕ್ಕವರೇನು

***

ಬದುಕುವುದೂ

ಒಂದು

ಕಲೆ !

ಇಲ್ಲ ?

ಕೊಲೆ !!

***

ಸಂತೋಷ ರಸಮಯ ಸಮಯ

ಕಾಗೆಬಂದು ಅಪಸ್ವರ ಎತ್ತಿದರೆ

ಕನಸು ಕಾಣುತ್ತಿರುವ ಹುಡುಗನೆದುರು

ಕವಡೆ ಶಾಸ್ತ್ರವ ಹೇಳಿದರೆ

ಶಕುನ ಸರಿಯಾಗುವುದೆ ?

ಬದುಕು ಬದಲಾಗುವುದೆ ? 

ಕೆಡುಕು ಒಡಕುಗಳ ಫಲವು ಸರಿಯಾಗುವುದೇ ?

ತಿಳಿಸೆನ್ನ ಸವಿಚೆನ್ನ ಛಲವಾದಿಯೆ !

***

ಬರಹದಲ್ಲಿ

ಕಸವಿರಲಿಯೆಂದೂ

ಗುಡಿಸಬೇಕು !

***

ಹೆಗ್ಗಣವದು

ಇರುವಲ್ಲಿ ಸಾಹಿತ್ಯ

ಕಲಬೆರಕೆ !

***

ಕೆಲವರಿಂದು

ತಿಳಿದಿದ್ದೆಲ್ಲಾ ವಾಂತಿ

ಮಾಡುತ್ತಿದ್ದಾರೆ !

***

ಯಾರು ಬಂದರೂ

ಬದುಕಲರಿಯು ನೀ

ಮುಂದೆ ಸಾಗುತ !

***

ದ್ವೇಷ ಅಸೂಯೆ

ಉಬ್ಬರದಲೆಗಳು ,

ದಾಟಲೇ ಬೇಕು !

***

ಕನಸುಗಳ

ಜೊತೆಗೆ ಸಾಗಿದರೂ

ನನಸ ಕಾಣು !

***

ಮಾತುಗಳಲ್ಲಿ

ಹಿಡಿತವಿರಲೆಂದೂ

ಹಗೆಯು ಬೇಡ !

***

ಹುಟ್ಟಿದ ಪ್ರತಿಯೊಬ್ಬ ಮನುಷ್ಯನವನು

ಜಗದಗಲವೂ  ನಡೆಯುವನವನು

ಮತ್ತದೇ ಹೊಂದಾಣಿಕೆ ಜೊತೆಗೂಡಿ ಸಾಗೆ

ಜೀವನದಿ ಸುಖದೇ ಬಾಳುವನವನು

***

ಪ್ರಜಾ ಪ್ರಭುತ್ವದಲ್ಲಿ

ತಪ್ಪು ಮಾಡದವ

ಇಲಿಯಾದ

ತಪ್ಪು ಮಾಡಿದವ 

ಇಲಿಯ ಬೇಟೆಯಾಡಿ

ಕೊಂದು ಬೆಕ್ಕಾದ

ಕೋಟೆ ಕೊತ್ತಳ ಕಟ್ಟಿ

ಮಹಾರಾಜರಂತೆ,

ರಾಜ್ಯ ದೇಶವಾಳಿದ !

ಇವುಗಳ ನಡುವೆ

ಜನನೀ ಜನ್ಮ ಭೂಮಿ

ಸ್ವರ್ಗಾಧಿಪತಿ ಗರೀಯಸಿ

ಎನುತ್ತಾ ಹೇಳುತ್ತಾ ,

ಭೂಮಿತಾಯಿಯ ಕೊನೆಗೆ

ಮೂಲೆ ಕಂಬವ ಹಿಡಿದು

ಕೂರುವಂತೆ ಮಾಡಿದ !!

ಜೈ ಹೊ ಭಾರತ್

ಜೈ ಜೈ ಜೈ ಜೈ ಹೊ

ಭಾರತ್ ಮಾತಾಕೀ ಜೈ ಹೋ ! 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್