ಹನಿಗಳು ಹತ್ತು ಹಲವು ರೀತಿ
ಯಾರೂ
ಕು-ಕವಿಗಳು
ನಾಡಿನಲಿಲ್ಲ
ಬರೆದವನಿಗೆ
ತಲೆ ಸರಿ
ಇಲ್ಲ !
ಕಣ್ಣ ಸನ್ನೆಗೆ
ಬಂದಳು
ಬಾಹು ಬಂಧನಕೆ
ಸಿಕ್ಕಳು
ತಾಳಿ ಹಿಡಿದು
ನಿಂತಳು
ನೋಡುವುದೇನು
ಈಗ
ಅವಳ ಸುತ್ತಲೂ
ಮಕ್ಕಳು !
ಜೀವನದ ದಾರಿಯಲಿ ಹಲವಾರು ತೊಂದರೆಯು
ಪಾತಾಳ ಸೇರಿದರೂ ಬಿಡದಾದ ಚಂದಿರೆಯು
ಹರಿದಿರುವ ಮನಸ್ಸಿನ ಹಿಂದೆಯೇ ಬರುವಳು
ಬೇಡವೆಂದರೂ ನನ್ನನ್ನೇ ನೋಡುತಲೆ ತಬ್ಬುವಳು
ನನ್ನ ಮನೆಯಂಗಳದ ರಾಣಿ
ಬಲ್ಲವರಿಗೆ ಗೊತ್ತು ಅವಳ ವಾಣಿ
ರಾತ್ರಿಯಾದರೆ ಬೊಬ್ಬೆ
ಹಗಲಲ್ಲಿ ಬರಿ ನಿದ್ದೆ
ಉಳಿದವರಿಗೆ ದಿನ ದಿನವು ಜಾಗರಣಿ
ಮದುವೆಯ ದಿನದ ಬಂಧನವು
ಸಂಭ್ರಮದೊಳಗೆ ಜೀವಸೌಧವು
ಕೈಯನು ಹಿಡಿದು ನಡೆಯುತಲೆ
ಮುಂದಿನ ಬದುಕಿಗೆ ಚೇತನವು
ಸುಖದ ಅಮಲಿನಲಿ
ಮುಂದೆ ಮುಂದೆ ಸಾಗುತಿರುವೆ
ದಾರಿಯಲಿ ಏನೋ ತಿಳಿಯೆನು
ಸವಿಯೆ !
ಮಕ್ಕಳಾದರೆಂಬ ಭಯವೂ ಇದೆ
ಸಾವಿಗೆಲ್ಲಿದೆ
ಭಯವು ಜೀವಾತ್ಮನೆ
ಉಸಿರು ನಿಂತ
ಗಳಿಗೆಯಲ್ಲಾಗಲೆ
ದೇಹ ನಶ್ವರ !
ಬದುಕೊಳಗೆ
ಸಾಧನೆಯು ಬರಲು
ಶರತ್ಕಾಲವು !
ಬರಹ
ಕ್ಕೆ
ಬರ
ಬಾರದು !
ಕಳೆದು ಹೋಗಿರುವ
ವರುಷಗಳೆಂದಿಗೂ
ಹಳತಲ್ಲವು ತಿಳಿ
ಬಾಳಿಗೆ ಮುನ್ನುಡಿಯು !
ಮಾಳಿಗೆಯಲ್ಲಿ
ಕುಳಿತ ಹುಡುಗಿಯು
ನೆಲ ನೋಡುವಳೇನು !
ಮೂಡುತ್ತಿರುತ್ತವೆ ಹುಡುಗನ
ಮೈಮನಸ್ಸುಗಳಲ್ಲಿ ಸದಾ ಮದನನ ಚಿಹ್ನೆಗಳು !
ಕಾರಣವೂ ಇಲ್ಲದಿಲ್ಲ ತಾರೆಯಂತೆ
ಚೆಲುವಾಗಿಯೇ ಹೆಣ್ಣುಮಗು ಮೈನೆರೆದಳು !
ಮನ್ನಿಸು ಗುರುದೇವಾ ನಿನ್ನಯ ಜೊತೆಗಿರುವೆ
ಬಣ್ಣದ ಮಾತಿಗೆ ಮರುಳಾಗಿ ಹೋಗದೆಲೆ
ಸುಖವಾಗಿ ಇರುವೆನು ನನ್ನೊಡೆಯಾ
ಮನದೊಳಗೆ ಏನಿದೆಯೋ ಹೇಳು
ಬಾಳಿನ ಪಲ್ಲವಿ ಮುದುಡದಂತೆ ನಡೆಯೋಣ
ಕೈಹಿಡಿದು ಮರ ಸುತ್ತಿರುವುದ ಕೇಳು
ಈಗಲಾದರೂ ಹೂವಿನ ಪರಿಮಳದಂತೆ ಬೆರೆಯೋಣ !
ಬಂಡೆಗಪ್ಪಳಿಸುವಂತೆ ಬಟ್ಟೆ ಒಗೆಯುತಲಿಹಳು
ರಪ ರಪನೆ ಹಪ್ಪಳ ಸಂಡಿಗೆ ಮಾಡುತಲಿಹಳು
ಬೋಸ ನೀನೆಂದು ನನ್ನ ಹಂಗಿಸುತಲಿಹಳು
ಬಾಸು ನಾನೆಂದು ಸವಿ ಹೇಳುತಲಿಹಳು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
