ಹನಿಗಳೊಂದಿಗೆ ಪಯಣ...
ಕವನ
ಯೋಗ್ಯತೆಯ ಪಯಣ...
ಪ್ರೀತಿ-ಮರ್ಯಾದೆ
ಗೌರವ-ಸನ್ಮಾನಗಳು
ತಾವಾಗಿಯೇ
ಸಹಜವಾಗಿ
ನಮ್ಮತ್ತ
ಬರಬೇಕು...
ಬಲವಂತವಾಗಿ
ಉನ್ಮತ್ತತೆಯಲಿ
ಅವುಗಳನೆಂದೂ
ಪಡೆಯಲು
ಅಸಾಧ್ಯ;
ಆ ಯೋಗ್ಯತೆಯ
ಸಂಪಾದನೆಯತ್ತ
ನಮ್ಮ ಪಯಣವಿರಲಿ
***
ದೌರ್ಭಾಗ್ಯ
ವೃದ್ಧಾಪ್ಯ
ಬಂದಾಗಲೇ
ವೃದ್ಧರ
ಕಷ್ಟದ
ಅರಿವು....
ಅಯ್ಯೋ
ವಿಧಿಯೇ
ಅಷ್ಟರಲ್ಲಾಗಲೇ
ಕಾಲದ
ಸರಿವು!
***
ಮಾರ್ಜಾಲ!
ತೌರು ನೆಲದ
ಪ್ರೀತಿಯದು ಉಕ್ಕಿ
ಮರಣವನೂ
ನೆನಪಿಸಿ
ಮತದಾರರನು
ಭಾವ ಸಮುದ್ರದಲಿ
ಮುಳುಗಿಸಿ
ಓಟನು ಕಸಿಯುವ
ಓ ಚುನಾವಣೆಯೇ
ನೀನದೆಂತಹ
ಮಾರ್ಜಾಲ
ಕಪಟ ಸನ್ಯಾಸಿ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್