ಹನಿಗಳೊಂದಿಗೆ...

ಹನಿಗಳೊಂದಿಗೆ...

ಕವನ

ಜನನಾಯಕ-ನಟ

ರಾಜಕೀಯದಲಿ

ಗೆದ್ದು ಬೀಗಿದ

ಜನ ನಾಯಕನ 

ಕಂಡೆ;

ಶತದಿನೋತೋತ್ಸವ

ಆಚರಿಸಿ ಸಂಭ್ರಮಿಸಿದ

ಸಿನಿಮಾ ನಟನ

ಕಂಡೆ;

ಆದರೆ....

ಜೀವನವೆಂಬ

ಕುರುಕ್ಷೇತ್ರ

ಯುದ್ಧವ ಮಾಡಿ

ಗೆದ್ದು-ಸಂಭ್ರಮಿಸಿದ

ಒಬ್ಬನೇ ಒಬ್ಬ

ನಾಯಕ-ನಟನ

ನೀವು ಕಂಡಿರಾ?

***

ಮಹಾ ಪ್ರಳಯ

ವಿದ್ಯುದ್ದೀಪಕೆ

ಸಾವಿರ ಸಂಶೋಧನೆ

ಮಾಡಿ ಸೋತು

ಕೊನೆಗೆ ಗೆದ್ದನಲ್ಲ

ಮಹಾ ವಿಜ್ಞಾನಿ

ಥಾಮಸ್ ಎಡಿಸನ್...

 

ಮನುಷ್ಯನ ಪರೀಕ್ಷೆಗೆ

ಮೂರೇ ಪ್ರಯತ್ನ

ಇದಕಿಂತ ಹೆಚ್ಚಿನ

ಪ್ರಯೋಗವಾದರೆ

ಮಹಾ ಪ್ರಳಯ

ಅದಕಿಲ್ಲ ಮೆಡಿಸನ್!

***

ಪ್ರಮಾಣ ವಚನ

ಮಂತ್ರಿ-ಶಾಸಕ

ಮಹೋದಯರೇ-

ದಯವಿಟ್ಟು

ಸ್ವೀಕರಿಸದಿರಿ

ದೇವರ ಹೆಸರಿನಲಿ

ಪ್ರಮಾಣ  ವಚನ...

 

ನೀವು ನಡೆವುದೇ

ನಿಮ್ಮ ಧೋರಣೆ

ಅಹಂಕಾರದ

ಅನುಸಾರ;

ದೇವರಿಗಾಗದಿರಲಿ

ಪ್ರಖರ ಅವಮಾನ!

***

ಓ ಆಶ್ವಾಸನೆಗಳೇ...

ಈ ಆಶ್ವಾಸನೆಗಳೇ

ಹೀಗೆ-

ಕೊಡುವಾಗ

ಅದೇನು

ಉತ್ಸಾಹದ

ಅಬ್ಬರದ ರಂಗು...

 

ಕಾರ್ಯರೂಪಕೆ

ತರುವುದು-

ಸರ್ಕಾರಕ್ಕೀಗ

ಬಹು ತೊಡಕಿನ

ಕಷ್ಟದ

ಋಣದ ಹಂಗು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್