ಹನಿಗಳ ಜೊತೆಗೊಂದು ಗಝಲ್ !

ಹನಿಗಳ ಜೊತೆಗೊಂದು ಗಝಲ್ !

ಕವನ

ಭಾಗ್ಯ

ನಾಡಿನಲ್ಲಿ

ವರುಷಗಳು

ಉರುಳಿದಂತೆ

ಸರಕಾರ

ವೇ

ಬದಲಾವಣೆ

ಜನರಿಗೆ

ಎಲ್ಲಾ

ಭಾಗ್ಯಗಳು

ದೊರಕುತ್ತಿವೆ

ಆದರೆ

ಅಗತ್ಯವೆನಿಪ

ರಸ್ತೆ ಭಾಗ್ಯವು

ದೊರಕಲೇ

ಇಲ್ಲ

ಛಲವಾದಿಯೆ !

***

ನ್ಯಾಯ ಎಲ್ಲಿದೆ?

ಜನಸಾಮಾನ್ಯ 

ನಮ್ಮ ದೇಶಕ್ಕೆ 

ಸ್ವಾತಂತ್ರ್ಯ 

ಸಿಕ್ಕಿದರೂ 

ಉಳ್ಳವರ ಕಾಲ 

ಕೆಳಗಿನ ಕಸವಾಗಿ 

ಇಂದಿಗೂ 

ಬದುಕುತ್ತಿದ್ದಾನೆ 

***

ಗಝಲ್

ಪಟಪಟನೆ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ

ಚಟಚಟನೆ ಕೂಡಿ ಬಡಿದೊಡೆ ನೀನು ನನ್ನವನೇ ಗೆಳೆಯಾ

 

ಯಾರೂ ಇಲ್ಲದ ವೇಳೆಯಲ್ಲಿ ಅಮಲು ಏರಿತೇ ಹೇಳು

ಗಟಗಟನೆ ಹೀರಿ ಕುಡಿದೊಡೆ ನೀನು ನನ್ನವನೇ ಗೆಳೆಯಾ

 

ಎಲ್ಲೋ ವಾಸನೆಯು ಬೀಸಿದರೆ ಅವನು ನೀನೇಯೇನು

ಲಟಲಟನೆ ಕನಸ ಮುಡಿದೊಡೆ ನೀನು ನನ್ನವನೇ ಗೆಳೆಯಾ

 

ಯೋಚನೆಯ ಲಹರಿಗಳು ಯಾವತ್ತೂ ಒಂದೇ ಇರುವವೇ

ಕಟಕಟನೆ ಕುಟುಕಿ ಕಡಿದೊಡೆ ನೀನು ನನ್ನವನೇ ಗೆಳೆಯಾ

 

ಜಗತ್ತಲ್ಲಿ ಬೆತ್ತಲಾದವರು ಎಂದಿಗೂ ಉಳಿದಿರುವರೇ ಈಶಾ

ಮಟಮಟನೆ ಶಿಸ್ತೇರಿ ದುಡಿದೊಡೆ ನೀನು ನನ್ನವನೇ ಗೆಳೆಯಾ

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್