ಹನಿಗಳ ಮಧುರ ಲೋಕ !

ಹನಿಗಳ ಮಧುರ ಲೋಕ !

ಕವನ

ಕೆಲವು

ಮಾತುಗಳು

ಕಾಡುತ್ತವೆ

ಹೇಗೆಂದರೆ

ಹೀಗೆ

ಕಾಡು

ಬಾ

ಎಂದರೂ

ನಾಡಿನ

ಲ್ಲೇ

ಉಳಿಯುತ್ತೇವೆ !

***

ತೋರಣಗಳ

ನಡುವೆ ಅರಳಿತು

ನವ ಯೌವನ !

***

ಹೃದಯ

ಆತ್ಮ

ಸಮ್ಮಿಲನ

ಸಂಬಂಧಗಳ

ನಡುವಿನ

ಬಿಂದು !

***

ಮೌನಗಳಿಂದು

ಮನಸುಗಳ ಜೊತೆ

ಸೇರುವುದಿಲ್ಲ

ವೈರಿಗಳಂತೆ ಬಾಳಿ

ಮಸಣ ಸೇರುತ್ತವೆ !

***

ದುಃಖದ ಹೊಳೆಯಲ್ಲಿ 

ತೇಲಿ ಸಾಗುತ್ತಿರುವೆ

ಹಾಯಿ ದೋಣಿಗಳಿಲ್ಲ

ಸವಿಯೆ

ದಡಸೇರುವ ತವಕದಲ್ಲಿರುವೆ !

***

ಯೌವನ ಓಡೋಡಿ ಬಂದಿತು

ಶೃಂಗಾರ ಪ್ರೀತಿಯ ತಂದಿತು

ಸುಖದ ಕಡಲು ಎದ್ದಾಗ

ಪ್ರೇಮವು ಉಕ್ಕುತ ನಿಂದಿತು

***

ಹುಟ್ಟು ಸಾವಿನ ನಡುವೆ ಪ್ರೀತಿಯಿದೆ

ಮೋಹ ಪಲ್ಲವಿ ಜೊತೆಗೆ ತಾಳ್ಮೆಯಿದೆ

ಗಂಡನು ಕೈಯನು ಹಿಡಿದಾಗ

ಹೆಂಡತಿ ಹತ್ತಿರ ಸೇರಿದಾಗ

ಜೀವನ ಪಾಠಕೆ ಸನಿಹ ಏಣಿಯಿದೆ

***

ಬಾಳಿನೊಲುಮೆಯೊಳು

ಸವಿ ಹರಡುತಿರೆ

ಬದುಕಿನಾಟವದು

ಹಾಳಾಗದು ನೋಡೆಂದು !

***

ಬಂಡೆಗಪ್ಪಳಿಸುವಂತೆ ಬಟ್ಟೆ ಒಗೆಯುತಲಿಹಳು

ರಪ ರಪನೆ ಹಪ್ಪಳ ಸಂಡಿಗೆ ಮಾಡುತಲಿಹಳು

ಬೋಸ ನೀನೆಂದು ನನ್ನ ಹಂಗಿಸುತಲಿಹಳು

ಬಾಸು ನಾನೆಂದು ವೀಣಾ ಹೇಳುತಲಿಹಳು

***

ಕೆಲವು

ಮಾತುಗಳು

ಕಾಡುತ್ತವೆ

ಹೇಗೆಂದರೆ

ಹೀಗೆ

ಕಾಡು

ಬಾ

ಎಂದರೂ

ನಾಡಿನ

ಲ್ಲೇ

ಉಳಿಯುತ್ತೇವೆ !

***

ಚಂದ್ರನಂತೆಯೇ

ನಾನಿದ್ದೆ 

ರಾಹು 

ಬಂದಂತೆ

ಬಂದಳು

ನನ್ನಲಿದ್ದ

ಎಲ್ಲವನ್ನೂ

ದೋಚಿ

ಕೊಂಡೊಯ್ದಳು !

***

ನರ್ತನವನು ಮಾಡುತಿರುವೆ ನಿನ್ನೊಳಿಂದು

ಅರ್ಥವನು ಹುಡುಕುತಿಹೆ ನನ್ನೊಳಿಂದು

ಬಿಳಿಯಿರಲು ಮೈಯಲ್ಲಿ ಮನದೊಳಗೆ ಆಸೆಗಳು

ಬರದಿರಲಿ ಬದುಕಲ್ಲಿ ನಾನೆಂಬ ಮೋಹಗಳು

***

ಮನ್ನಿಸು ಗುರುದೇವಾ ನಿನ್ನಯ ಜೊತೆಗಿರುವೆ

ಬಣ್ಣದ ಮಾತಿಗೆ ಮರುಳಾಗಿ | ಹೋಗದೆಲೆ

ಸುಖವಾಗಿ ಇರುವೆನು ನನ್ನೊಡೆಯಾ 

***

ಎಚ್ಚರಿಕೆ ಇಹುದಯ್ಯ ನಮ್ಮೊಳಗೆ ನಿಮ್ಮೊಳಗೆ

ಸರಕಾರ ನೋಡಯ್ಯ ಕಣ್ಮುಚ್ಚಿ ಒಳಗೆ

ಕುಳಿತಿರುವ ಚಂದವನು ಬಡವರದು ನೋಡುತ

ಹೈರಾಣ ಆಗಿಹರು ಮನೆಯೊಳಗೆ ಬಾಡುತ

***

ಮನದೊಳಗೆ ಎನಿದೆಯೊ ಹೇಳು

ಬಾಳಿನ ಪಲ್ಲವಿ ಮುದುಡದಂತೆ

ನಡೆಯೋಣ

ಕೈಹಿಡಿದು ಮರ ಸುತ್ತಿರುವುದ ಕೇಳು

ಈಗಲಾದರೂ ಹೂವಿನ ಪರಿಮಳದಂತೆ

ಬೆರೆಯೋಣ

***

ನನ್ನೊಲವಿನ

ಸವಿಗನಸಿನೊಳು

ನಿನ್ನೊಲವನು

ಸೇರಿಸುತಿರುವಂತೆ

ನನಸಾಯಿತು ಬಾಳು !

-ಹಾ ಮ  ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್