ಹನಿಗಳ ಲೋಕ
ಕವನ
ಬದುಕಿರುವ
ಕಡೆಯಲ್ಲಿ ಹೆಜ್ಜೆಯ
ಗುರುತಿರಲಿ !
ಬೀಡಾಡಿಯಾಗಿ
ತಿರುಗು , ಮುಂದೆ ನೀ
ಜನನಾಯಕ !
ಗಾಯವಾಗಿದೆ
ತನುವಿಗೆ ,ಮನವು
ಸರಿಯಿರಲಿ !
ಜೀವವಿರುವ
ಪ್ರತಿಯೊಬ್ಬನಲ್ಲಿಯೂ
ಪ್ರೀತಿಯಿರಲಿ !
ಕನಸುಗಳು, ಮೇಲೆ
ಅಂತರಿಕ್ಷದಲ್ಲಿಲ್ಲ
ನಮ್ಮೊಳಗಿವೆಯಿಂದು
ತಿಳಿಯು ನೀ ಜಾಣ !
ಉತ್ತರಿಸುವರೀಗ
ಇಲ್ಲದಿರುವಾಗಲೆ
ಬಿತ್ತರಿಸುವ ಮಂದಿ
ತಲೆಯೆತ್ತುತ್ತಾರಯ್ಯಾ !
ಜೀವನ ನದಿಯಲ್ಲಿ
ಮುಳುಗಿದವನಿಗೆ
ಕಾಡಾದರೆನೀಗೀಗ
ನಾಡಾದರೇನು ಶಿವ !
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
