ಹನಿಗಳ ಲೋಕದಲ್ಲಿ...

ಹನಿಗಳ ಲೋಕದಲ್ಲಿ...

ಕವನ

ಸವಿ ನೆನಪು 

ಇರದಿರುವ 

ಮಂದಿಯೊಳು 

ಮಿತ್ರತ್ವ 

ಬೇಕೇನು 

ಛಲವಾದಿಯೆ ||

***

ಯಾರ ಬಗ್ಗೆಯೆ ಒಲವು ಮೂಡಿಸುವ 

ಮೊದಲು, ನನ್ನ ಬಗ್ಗೆಯೇ ಮೂಡಲಿ

ಬದುಕು ಅರಳರಳಿ ಹಾಡಲಿ !

ನನ್ನೊಳಗಿನ ನಾನು ಅರಳದೆಯೆ

ಇನ್ನೊಬ್ಬರ ಭಾವನೆಗಳವರಲಿ

ಹೇಗೆ ತಾನೇ ನಾನಾಗಿ ತುಂಬಲಿ !!

***

ಬದುಕ ಬಗ್ಗೆ

ತಿಳುವಳಿಕೆ ಹೊಂದು

ಮುಕ್ತಿಯ ಪಡೆ !

***

ಮೌನವು ಮನುಷ್ಯನ ಜಾಣತನವು 

ಮೋಹವು ಪ್ರೀತಿಯಲ್ಲಿಯ ಸಾಧನವು 

ಕೈ ಹಿಡಿದು ಪ್ರೇಮದೊಳು ನೋಡಿದಿರೆ

ಎಲ್ಲದರೊಳು ಇದೆ ಸವಿಮನವು

***

ಮುಳ್ಳುಗಳ ನಡುವೆ

ಮೊಗ್ಗು ಅರಳುತ್ತದೆ

ಹೂವಾಗಿ ಪರಿಮಳ

ಸುತ್ತೆಲ್ಲ ಹರಡುತ್ತದೆ !

***

ಮೌನವಾಗಿದ್ದರಿಲ್ಲಿ

ನಮ್ಮ ಅರೆಯುವರು

ಧೀರನಾಗೆಯಿರಲು

ಹೊಗಳಿ ಸಾಗುವರು ! 

***

ಮೌನ ನಮಗೆಂದೆಂದೂ

ಒಳ್ಳೆಯದ ಮಾಡುತ್ತೆ

ಕಾರಣವಿಲ್ಲದೆಯೆ

ಹೊಡೆಯುವರ ಹಾಗೆ ! 

-ಹಾ ಮ ಸತೀಶ ಬೆಂಗಳೂರು*

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್