ಹನಿಗಳ ಲೋಕದಲ್ಲಿ...

ಹನಿಗಳ ಲೋಕದಲ್ಲಿ...

ಕವನ

ನಿಜ

ಖದೀಮರೆಂದ

ರೇ

ಹೀಗೆ 

ಹೇಗೆಂದರೆ ?

ನಿಜ

ಕಳ್ಳರಲ್ಲ

ಒಳ

ಕಳ್ಳರು !!

***

ಹುಷಾರು

ಕಳ್ಳರು

ಇರುವಲ್ಲಿ

ಪೋಲೀಸರು !

ರಾಜಕೀಯ

ಇರುವಲ್ಲಿ

ಕಳ್ಳರು !!

***

ಬರಹಗಾರರ

ಬರಹಗಳು ಮಾತ್ರ

ಸವಿಯೊಗರು !

***

ಉಪ್ಪಿನಕಾಯಿ

ತಿನ್ನಲದು ರುಚಿಯೆ

ಹೊಟ್ಟೆಗಾಗದು !

***

ಮಜ್ಜನ

ಮೌನವಿರುವ

ಮಾನಿನಿಯರ

ಮೇನೆಯಲ್ಲಿ ಇರಿಸಿದ

ಮೌನಿಯಾದ

ಮೀನುಗಳನು

ಮೋದದಿಂದ ಬಳಸಿದ

***

ವಿಮರ್ಶೆ

ವಿಮರ್ಶೆ ಮನುಷ್ಯನನ್ನು

ಬದುಕಿಸಲಿ ಸಾಯಿಸಬಾರದು

ಬರಹಗಾರರನ್ನು ಉತ್ತೇಜಿಸಲಿ

ಹೊರತು ಅಳಿಸಬಾರದು

ಹೊಸ ಹರೆಯದವರಲ್ಲಿ

ಕನಸನ್ನು ಅರಳಿಸಲಿ

ಹೊಸಕಿ ಹಾಕಬಾರದು

ಬದುಕಿನ ಹೊಂಗನಸು

ಕಟ್ಟಿಕೊಂಡವರ ಉಳಿಸಲಿ

ಹೊರತು ತುಳಿಯಬಾರದು

ವಿಮರ್ಶೆ ವಿಮರ್ಶೆಯಾಗೇ ಇರಲಿ

ಹೊರತು ಸ್ವ- ವಿಮರ್ಶೆಯಾಗದಿರಲಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್