ಹನಿಗಳ ಲೋಕ

ಹನಿಗಳ ಲೋಕ

ಕವನ

ನೆನೆ ಮನವೇ....

ಶಂಕರ

ಬಸವಾದಿ

ಪ್ರಮಥರು

ಮನುಕುಲದ

ಒಳಿತಿಗಾಗಿ

ಶ್ರಮಿಸಿದವರು...

ಅವರನು

ನೆನೆಯದ

ಈ ಮಾನವ

ಜನ್ಮವೇತಕೋ

ಮದವೇರಿದ

ಮನುಷ್ಯನೇ?

ನೆನೆದವರೊಮ್ಮೆ

ಧನ್ಯನಾಗಿಬಿಡು!

***

ಪುಸ್ತಕ-ಮಸ್ತಕ

ಪುಸ್ತಕಗಳೇ

ಮನುಕುಲದ

ನಿಜವಾದ

ಜ್ಞಾನದ

ಮಸ್ತಕಗಳು....

ಅನುಭವಗಳನು

ಬಾಚಿಕೊಳ್ಳಲು

ಇರುವ ಒಂದೇ

ಸಮರ್ಥ

ದಾಖಲೆಗಳು!

***

ನಾನಾರು...?

ನಿನ್ನ 

ಜಂಭವನಿಳಿಸುವ

ಹುಂಬ

ನಾನಲ್ಲ....

 

ನನ್ನ

ಕೊಬ್ಬನಿಳಿಸುವ

ಸುಬ್ಬ

ನಾನು!

***

ಪ್ರಜ್ಞೆ

ನೀನೇನು

ಮಾಡಿದೆಯೆಂದು

ಕೇಳುವ

ಪ್ರಶ್ನೆ

ನಿನ್ನದಿರಬಹುದು...

 

ಆದರೆ

ನಾನೇನು

ಮಾಡಬೇಕೆಂಬ

ಪ್ರಜ್ಞೆಯೂ

ನಿನ್ನದಿಹುದು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್