ಹನಿಗಳ ಲೋಕ !

ಹನಿಗಳ ಲೋಕ !

ಕವನ

ದುರಂತ ಬದುಕು!

ಹಕ್ಕಿ- 

ಗಾಳಿಬಿಟ್ಟು

ನೀರಿಗಿಳಿಯಬಾರದು;

ಮೀನು- 

ನೀರ ಬಿಟ್ಟು

ಗಾಳಿಗೊಡ್ಡಬಾರದು;

ಮನುಷ್ಯ- 

ನನ್ನ ಪರಿಧಿಯನು

ಮೀರಿ ವರ್ತಿಸಬಾರದು;

ಎಲ್ಲವೂ-

ದುರಾದೃಷ್ಟಕ್ಕೆ

ತೆರೆದಿಟ್ಟ 

ದುರಂತ ಬದುಕು!

***

ಅಧಿಕಾರ...!

ಅಧಿಕಾರವೆಂಬುದೊಂದು

ತಿಕ್ಕಲುತನದ

ಪರಮಾವಧಿ....

ಹಸಿದು ಮಲಗಿ

ಕನಸಿನಲಿರುವ

ಓರ್ವ

ಭಿಕ್ಷುಕನೂ

ಕಾಲಲಿ

ಅನ್ನವನ್ನು

ಒದೆಯಬಲ್ಲನೆಂದರೆ-

ಅನ್ನಬ್ರಹ್ಮನನೇ

ಧಿಕ್ಕರಿಸುವ

ಅದೆಷ್ಟರ ಮಟ್ಟಿನ

ಪಿತ್ತಾಭ್ರಂಶವಿರಬಹುದು

ಈ ಅಧಿಕಾರ!

***

ದೇಶದ ಶಕ್ತಿ

ಒಂದು

ದೇಶದ

ಶಕ್ತಿ....

 

ಸ್ವತಂತ್ರವಾಗಿ

ಬದುಕಬಲ್ಲ

ವ್ಯಕ್ತಿ!

***

ಪ್ರಕೃತಿ ಪ್ರಭು....

ಬಿಸಿಲಿನಿಂ ನೀರಿಳಿವ

ಧಗೆಗೆ ಒಮ್ಮೆಗೇ

ಮಳೆಯಂ ಸುರಿಸಿ

ತಂಪೆರೆದು ಬಿಡುವೆ....

 

ಪೂರ್ವದಲಿ ಕೆಂಪು

ಸೂರ್ಯನನೇ ತರುವೆ;

ಆ ಹುಣ್ಣಿಮೆಗೆ ಪೂರ್ಣ

ಚಂದ್ರನನೇ ತಂದಿಡುವೆ....

 

ನೀನೆಂತಹ ಅದ್ಭುತ

ಮಾಟಗಾರನೋ

ಇಲ್ಲಾ ಮಂತ್ರಗಾರನೋ

ಓ ಪ್ರಕೃತಿ ಪ್ರಭುವೇ!

 

ನೀನಿರಬೇಕು ಜಾದೂಗಾರ

ಇಲ್ಲಾ ವಿನ್ಯಾಸಗಾರ

ಯಾರು ನಿ ಹೇಳಿಬಿಡು...

ಮಾಡುವೆನು ನಮಸ್ಕಾರ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್