ಹನಿಗಳ ಲೋಕ !

ಹನಿಗಳ ಲೋಕ !

ಕವನ

ಭಾರತ - ಉತ್ತರ ದಕ್ಷಿಣ

ಭಾರತದ ಉತ್ತರದಿ

ಭೂ ಕಂಪನದ ಸದ್ದು

ಸಾವಿನ ನೆರಳಲ್ಲಿ ಬದುಕುತ್ತಿರುವ ಜನ

ಕರುನಾಡ ನೆಲದಲ್ಲಿ

ಚುನಾವಣೆ ಮುಗಿದಿದೆ

ಸರಕಾರದ ನೆರಳಿಗೆ ಕಾಯುತ್ತಿರುವ ಜನ

***

ಮುಗಿದ ಮೇಲೆ

ವಯಸ್ಸು ಮುಗಿದ ಮೇಲೆ

ಮನೆಯ ಕಟ್ಟುವ ಕೆಲಸ

ಮುಗಿದಾಗ ಯಜಮಾನ ಹೆಣವಾದನಂತೆ

ಈಗಿರುವ ಪಕ್ಷಗಳ

ಯಜಮಾನರೂ ಕೂಡ

ಅಧಿಕಾರಕ್ಕಾಗಿ ಕುರ್ಚಿ ಕೊಂಡರಂತೆ

***

ಇರುವ ಒಬ್ಬಳೆ

ಇರುವ ಒಬ್ಬಳೇ ಮಗಳೆಂದು

ಸಂಸ್ಕಾರ ಕಲಿಸಿಲ್ಲ

ಬರಿ ಓದು ಓದಿಸುತ ಕಾಲ ಕಳೆದರಂದು

ಹೆಸರಾದ ಸಂಸ್ಥೆಯೊಳಿಂದು

ಬಹು ದೊಡ್ಡ ಕೆಲಸ

ವಿದೇಶಿ ಸಂಸ್ಕೃತಿಯ ಕಲಿತು ಸಾಗಿದಳಿಂದು

***

ಸಾಯಬೇಕು

ಇಲ್ಲೊಬ್ಬ 

ಕನ್ನಡ ಓರಾಟಗಾರನ

ಉವಾಚ

ನಾನು

ಕನ್ನಡದ ಆಸ್ತಿ

ನೀವೂ

ನಿಮ್ಮ ಮಕ್ಕಳೂ

ಕನ್ನಡದ ಆಸ್ತಿ

ಆದರೆ

ನನ್ನ ಮಗ

ಮಾತ್ರ

ಇಂಗ್ಲೀಷ್ ಆಸ್ತಿ

ಛಲವಾದಿಯೆ!

***

ಕನ್ನಡ ಶಾಲೆ

ಕನ್ನಡ

ನಾಡಿನಲ್ಲಿ

ಹುಟ್ಟಿದ

ಜನಸಾಮಾನ್ಯನ

ಮಗು

ಕನ್ನಡ ಶಾಲೆಗೇ

ಹೋಗಬೇಕು

ಕನ್ನಡವನ್ನೇ

ಕಲಿಯಬೇಕು

ಯಾಕೆಂದರೆ

ಅವನು

ಕನ್ನಡದ ಮಗು

ಅದೇ

ಕನ್ನಡ ಹೋರಾಟ

ಹಾರಾಟವೆನ್ನುವವರ 

ಮಕ್ಕಳು

ಇಂಗ್ಲೀಷೇ 

ಕಲಿಯಬೇಕು

ವಿದೇಶಗಳ

ಸುತ್ತಬೇಕು !

ಆದರೆ

ಕನ್ನಡದ ಮಗು

ಮಾತ್ರ

ಕನ್ನಡ ನಾಡಲ್ಲೇ

ಇದ್ದು

ಸಾಯಬೇಕು 

ಛಲವಾದಿಯೆ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್