ಹನಿಗಳ ಲೋಕ
ಆಧುನಿಕ ಹೊಯ್ಸಳ
ಚಿರತೆಯನ್ನೇ
ಸೆರೆ ಹಿಡಿದು
ಅರಣ್ಯ
ಇಲಾಖೆಗೆ
ಒಪ್ಪಿಸಿದ
ಭೂಪ...
ಈತನೇ
ಇರಬೇಕು
ಆಧುನಿಕ
ಕನ್ನಡ ನಾಡಿನ
ಹೊಯ್ಸಳನ
ರೂಪ!
ಉದ್ಧಟತನ
ಏರ್ ಇಂಡಿಯಾ
ಅಧಿಕಾರಿ-
ಮೃದು ಮಾತನಾಡು
ಎಂದಿದ್ದಕ್ಕೆ
ಸಹಪ್ರಯಾಣಿಕನ
ಕಪಾಳ ಮೋಕ್ಷ...
ಕೆಳಗಿಳಿದು ಬಾ
ಮಗುವೇ-
ನಿನಗೆ ಕಾದಿದೆ
ಕಟು ಮಾತಿನ
ದಂಡದ
ಜೈಲು ಶಿಕ್ಷಾ!
***
ಭೀಮನಮವಾಸ್ಯೆ
ನರಪೇತಲ
ಭೀಮಸೇನರಾಯರಿಗೆ
ಹೆಂಡತಿಯ
ದಿನ ನಿತ್ಯದ
ಮಂಗಳಾರತಿಯ
ಮಹಾ ಸಜೆ...
ಅವರ
ಅದೃಷ್ಟಕೆ
ವರ್ಷಕೆ
ಒಂದು ದಿನ ಮಾತ್ರ
ಭೀಮನಮವಾಸ್ಯೆಯ
ವಿಶೇಷ ಪೂಜೆ!
***
ಏಕೀ ಬ್ಯಾನ್?
ಓ ದೇವರೇ-
ಕರ್ನಾಟಕದ
ದೇವಸ್ಥಾನಗಳಲಿ
ಸರ್ಕಾರದಿಂದ
ಮೊಬೈಲ್
ಬಳಕೆ ಬ್ಯಾನ್...
ಬ್ಯಾನ್ ಮಾಡಲು
ಬೇಕಾದಷ್ಟು
ವಿಷಯಗಳಿರುವಾಗ
ನಿಮಗೇಕೆ ಬಿತ್ತು
ದೇವಸ್ಥಾನ-ಮೊಬೈಲ್
ಮೇಲೆ ಕಣ್?
***
ಯಜಮಾನಿಕೆ
ಮನೆ
ಯಜಮಾನಿಗೆ
ಗೃಹಲಕ್ಷ್ಮಿ
ಯೋಜನೆ-
ಸರ್ಕಾರದಿಂದ
ಪ್ರಾರಂಭ...
ಈಗ ಮನೆ
ಯಜಮಾನಿ
ಯಾರೆಂಬುದೇ-
ಅತ್ತೆ-ಸೊಸೆಯರ
ನಡುವೆ ಜಗಳದ
ಆರಂಭ!
***
ಘೋರ ತಪ್ಪು
ತಪ್ಪುಗಳ
ಮಾಡದಿಹ
ಮನುಜರನು
ಈ ಜಗದಲಿ
ನೀವು ಎಲ್ಲೂ
ಕಾಣಿರೋ...
ತಪ್ಪುಗಳ
ಹುಡುಕುವವರೇ
ಈ ಜಗದಲಿ
ಮತ್ತೊಂದು
ಘೋರ ತಪ್ಪನು
ಮಾಡುತಿಹರೋ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ