ಹನಿಗಳ ಲೋಕ...

ಹನಿಗಳ ಲೋಕ...

ಕವನ

ಘೋರ ತಪ್ಪು 

ತಪ್ಪುಗಳ

ಮಾಡದಿಹ

ಮನುಜರನು

ಈ ಜಗದಲಿ

ನೀವು ಎಲ್ಲೂ

ಕಾಣಿರೋ...

 

ತಪ್ಪುಗಳ

ಹುಡುಕುವವರೇ

ಈ ಜಗದಲಿ

ಮತ್ತೊಂದು 

ಘೋರ ತಪ್ಪನು

ಮಾಡುತಿಹರೋ!

***

ಪಾಪ-ಪುಣ್ಯದ ಫಲ! 

ದೊಡ್ಡ ಮನೆಯೊಂದನು

ಕಟ್ಟಿಸಿದ ನಾವು-

ಇರುವೆವು ಕಿಷ್ಕಿಂದೆಯ

ಔಟ್ ಹೌಸ್ನಲಿ...

ಕೊಡುವೆವು ದೊಡ್ಡ 

ಮನೆ ಬಾಡಿಗೆಗೆ...

 

ಇದು ಅವರವರು

ಮಾಡಿದ 

ಪಾಪ-ಪುಣ್ಯವೇ ಸರಿ-

ಕಟ್ಟಿಸಿದ ಪಾಪ ನಮಗೆ;

ಬಾಡಿಗೆ ಕಟ್ಟಿದ

ಪುಣ್ಯ ಅವರಿಗೆ!

***

ಶ್ರೀಮಂತ!

ಬೆಣ್ಣೆಯನು

ಕಡೆದು

ತುಪ್ಪವನು

ಕಾಯಿಸಿದವನು

ಗಡಿಗೆ ತುಪ್ಪವ

ಕುಡಿವನೇ....?

 

ಅಂತೆಯೇ

ಈ ಜಗದಲಿ

ಸಂಪತ್ತನು

ಹಂಚಿ ತಿಂದಾತ

ನಿಜವಾದ

ಶ್ರೀಮಂತನೇ!

***

ತತ್ವಜ್ಞಾನಿ 

ತಾಳ್ಮೆಯ

ಹೆಂಡತಿ

ಸಿಕ್ಕರೆ-

ನಿನ್ನ

ಜೀವನವೇ

ಸುಖದ ಖನಿ...

 

ಕಿರಿಕಿರಿ

ಮಾಡುವವಳಾದರೆ

ಸಂದೇಹ ಬೇಡ-

ನೀನಾಗುವೆ

ಪರಮ

ತತ್ವಜ್ಞಾನಿ!

***

ಸೇಫ್ 

ಪತ್ರ

ಬರೆಯುವ

ಸಂಪ್ರದಾಯ

ಬೇಡ-

ಮುಖ್ಯಮಂತ್ರಿ

ಸಿದ್ದರಾಮಯ್ಯ...

 

ಎಲ್ಲಾ

ಮೊಬೈಲ್

ವಾಟ್ಸ್ ಆಪ್

ಮೇಸೇಜ್ಗಳಿರಲಿ-

ಇದುವೇ 

ಸೇಫ್ ಕಣಯ್ಯ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್