ಹನಿಗಳ ಲೋಕ !

ಹನಿಗಳ ಲೋಕ !

ಕವನ

ನಾಡಿನ

ಚುಕ್ಕಾಣಿ

ಹಿಡಿದವರು

ಹೆಗ್ಗಣಗಳಾದರೆ ?

ಜನಸಾಮಾನ್ಯರಿಗೆ

ಮೋರಿಯೇ

ಗತಿ !

***

ಯಾರೂ

ನರಿಗಳೂ 

ಅಲ್ಲ

ಸಿಂಹಗಳೂ

ಅಲ್ಲ

ಅವರವರ

ಸ್ವ 

ಸಾಮರ್ಥ್ಯವೇ

ಹಾಗಾಗುವಂತೆ

ಮಾಡುತ್ತವೆ !

***

ಮಹಲಿನ ತಂಪಲ್ಲಿ

ಕುಳಿತವರಿಗೆಲ್ಲ

ಕಾವ್ಯದ ಸೊಗಡೆಂದೂ

ಅರ್ಥವಾಗುವುದಿಲ್ಲ !

***

ಕತ್ತೂರಿ ಪರಿಮಳ

ಮೃಗಕರಿವಿರದು

ಆದೇ ಕಾವ್ಯದರಿವು

ಕವಿಗಿರುವುದೆಂದೂ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್