ಹನಿಗಳ ಲೋಕ...

ಹನಿಗಳ ಲೋಕ...

ಕವನ

ವಿಸ್ಮಯ ಯಂತ್ರ! 

ಈ ಜಗದಲಿ

ನೀ ಅದೆಂತಹಾ

ವೈವಿಧ್ಯಮಯ

ಯಂತ್ರಗಳನು

ನೋಡಿರುವೆಯೋ

ಓ ತಮ್ಮಾ...

 

ಆದರೆ ಈ

ದೇಹವೆಂಬೋ

ಪರಮಾದ್ಭುತ

ವಿಸ್ಮಯ ಯಂತ್ರ

ತಯಾರಿಸಿರುವನೋ

ಆ ಬ್ರಹ್ಮಾ!

***

ಜುಗುಪ್ಸೆ ಬರುತಿದೆ...

ಜುಗುಪ್ಸೆ ಬರುತಿದೆ

ಎನಗೆ ಜುಗುಪ್ಸೆ ಬರುತಿದೆ

ಸ್ವಾತಂತ್ರ್ಯ ತಂದುಕೊಟ್ಟ

ಮಹನೀಯರನು

ಅಗೌರವ

ಮಾಡುವವರ ಕಂಡು...

 

ಸ್ವತಂತ್ರ ಭಾರತದ

ಕನಸು ಕಂಡು

ಹೋರಾಡಿ

ಮಡಿದವರ

ನೆನೆಯದವರ ಕಂಡು

ಜುಗುಪ್ಸೆ ಬರುತಿದೆ!

***

ಅವಮಾನ-ಸನ್ಮಾನ 

ಏತಕೆ

ಶೋಕಿಸುವೆ

ಓ ಹುಲು

ಮನುಜಾ

ಆಯಿತೆಂದು

ಅವಮಾನ...

 

ಒಂದು ಕಡೆ

ಅವಮಾನ

ಆದರೇನು....?

ಇನ್ನೆರೆಡು ಕಡೆ

ಕಾದಿರಬಹುದು

ಸನ್ಮಾನ!

***

ಎರಡು ಮುಖ 

ಜೀವನದ

ಯಾವ 

ಮುಖ

ನಿನಗೆ

ಸಂತೋಷ

ನೀಡುವುದೋ...

 

ಅದರ

ಇನ್ನೊಂದು

ಮುಖವೇ

ನಿನಗೆ

ದುಃಖವನ್ನೂ

ನೀಡುವುದು!

***

ಮಹಾಭಾರತ! 

ಮಹಾಭಾರತಲ್ಲಿ

ಏನಿಲ್ಲವೋ

ಅದು

ಬೇರೆಲ್ಲೂ ಇಲ್ಲ;

ಮಹಾ ಕಾವ್ಯವಿದು

ಮಹಾ ಭಾರತ..

 

ಧರ್ಮಕ್ಷೇತ್ರೇ

ಕುರುಕ್ಷೇತ್ರೇ...

ಧರ್ಮ, ಸತ್ಯ

ನ್ಯಾಯ ನೀತಿಗಳ

ಆಗರವಿದು

ಭಾರತ ಕಥಾ!

***

ಆಪರೇಷನ್ 

ನಾವೇನಾದ್ರೂ

ಆಪರೇಷನ್ಮಾಡಿದ್ರೆ

ನೀವು ಮುಟ್ಟಿ 

ನೋಡ್ಕೊಳ್ಳೋಕೂ

ಆಗೋಲ್ಲಾ-

ಸಿ ಟಿ ರವಿ....

 

ನೀವು ಆಪರೇಷನ್ 

ಮಾಡಿ ಮಾರಾಯ್ರಾ...

ಜಾಗ ಯಾವ್ದೂ ಅಂತ

ಹೇಳಿದ್ರೆ- 

ಮುಟ್ಟಿ ನೋಡ್ಕೋಳ್ಳೋಕೂ

ಹೋಗೋಲ್ಲಾ!

-ಕೆ ನಟರಾಜ್ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್