ಹನಿಗಳ ಸೊಗಡು !
ದಾದಿ ಜಗದ ದೀ ದೀ
ದಾದಿಯರೇ
ಈ ಜಗದಲಿ
ಬೆಳಗುತಿರುವ
ನಮ್ಮ
ಮಾತೆಯರು...
ನಿಸ್ವಾರ್ಥ
ಶಿಶ್ರೂಷೆಯಲಿ
ರೋಗಿಗಳ
ಕೊಳೆಯ
ತೊಳೆವವರು...
ತಾಯಿಯ
ಸ್ಥಾನವನು
ನಂತರದಲಿ
ತುಂಬಬಲ್ಲ
ದೇವತೆಯರು!
(ದಾದಿಯರ ದಿನಕ್ಕಾಗಿ...)
***
ಲೋಕದ ನಿಯಮ
ಸೋತವೆಂದು
ದುಃಖದಿ
ಕೊರಗದಿರಿ;
ಗೆದ್ದೆವೆಂದು
ಹರುಷದಿ
ಬೀಗದಿರಿ...
ಸೋತವರು
ಭೂತಕಾಲವನು-
ಗೆದ್ದವರು
ಭವಿಷ್ಯವನು-
ಆತ್ಮ ವಿಮರ್ಶೆ
ಮಾಡಿಕೊಳ್ಳುವ
ವರ್ತಮಾನದ
ಪರ್ವಕಾಲ...
ಬದಲಾವಣೆ
ಈ ಲೋಕದ
ನಿಯಮ;
ಅದರಂತೆ
ಬದುಕುವುದೇ
ಎಲ್ಲರ ಕರ್ಮ!
***
ಎಚ್ಚರಿಕೆ
ಮತದಾನವೆಂಬ
ಕುರುಕ್ಷೇತ್ರದಲಿ
ಹೋರಾಡಿ ಗೆದ್ದ
ಅತಿರಥ-ಮಹಾರಥರೇ-
ಪ್ರಜಾ ಪ್ರಭುತ್ವದ
ಸಾಮ್ರಾಜ್ಯದಲಿ
ಶುದ್ಧ-ಪ್ರಾಮಾಣಿಕ
ಆಡಳಿತ ನೀಡದೆ;
ಅಪ್ರಾಮಾಣಿಕ
ಅವಿಧೇಯರಾಗಿ
ಅಧಿಕಾರದ
ಉನ್ಮತ್ತತೆಯಿಂದ
ಉರಿದಿರೋ...
ನೀವೂ ತೆರಬೇಕಾದೀತು
ಎರಡು ಪಟ್ಟು ದಂಡ!
ಶುದ್ಧವಿರಲಿ
ನಿಮ್ಮ ರುಂಡ;
ಬುದ್ಧಿಕಲಿಸಲು
ಸದಾ ಸಿದ್ಧವಾಗಿರುವ
ಮತದಾರ ಪ್ರಭುವೆಂಬ
ಚಂಡ-ಪ್ರಚಂಡ!
***
ಭ್ರಮ ನಿರಸನ!
ನಾಯಿಬಾಲವದು
ಡೊಂಕೇ ಗೆಳೆಯಾ...
ಮತದಾರ ಕೊಟ್ಟ
ತೀರ್ಪಿಗೆ
ತಾತ್ಕಾಲಿಕವಾಗಿ
ದಬ್ಬೆ ಕಟ್ಟಿ
ನೆಟ್ಟಗಾಗಿದ್ದ ಬಾಲ-
ಮತ್ತದು ಮುರಿದು
ಎಡ-ಬಲಕೇ
ನೇತಾಡುತಲಿದೆ;
ನಾಯಿ ಬಾಲ
ಡೊಂಕೇ ಡೊಂಕೇ...
ಅಯ್ಯೋ
ಭ್ರಮ ನಿರಸನ
ಗೊಂಡೆಯಾ ಮಂಕೇ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ