ಹನಿಗವನಗಳು
ನನ್ನ ಕಾರು ಚಿಕ್ಕದು
ಆ ಲಾರಿಗಿಂತಾ
ಮಾರಿಬಿಡಲಾ ಅಂತಾ
ಒಟ್ಟಿನಲಿ ತಿಳಿಯಬೇಕು
ಅವಳಿಗೆ ನಾ ಬುದ್ದಿವಂತಾ...:)
----------------------------------------------------------------------ಒಮ್ಮೆ ಹೋಗಿ ನೋಡಿದೆ
ಅ ಕೊಳದ ಬಳಿಗೆ
ತಿಳಿದುಹೋಯಿತು ನನಗೆ
ಆ ರಾತ್ರಿ ಇಳಿದಿದ್ದಾನೆ ಚಂದ್ರ ಧರೆಗೆ
ಏನುಕಾದಿದೆಯೋ ನನಗೆ
ನನ್ನವಳು ಪ್ರೀತಿಸುತ್ತಾಳೆ
ಅವನ ಒಳಗೊಳಗೆ...
----------------------------------------------------------------------
ಈಗ ಹೀಗೆ ತೂರುತ್ತಾ ಹೋದರೆ ಕೇಳುತ್ತಾಳೆ
ಹೆಂಡತಿ ಕುಡಿದಿರೇನು?
ಯಾವುದಕ್ಕೂ ಮಾತನಾಡಿಸಿ ಹೋಗುತ್ತೇನೆ
ಪಕ್ಕದ ಬೀದಿಯ ಸುಂದರಿಯನ್ನು...
----------------------------------------------------------------------
ಆತ ಕೇಳುತ್ತಿದ್ದಾನೆ
ನಿಮ್ಮದು ಯಾವ ಊರು?
ನಾ ನಿಜವ ನುಡಿದುಬಿಟ್ಟೆ
ನನ್ನದೇನಿಲ್ಲ ಅವಳದೇ ಕಾರುವಾರು...
----------------------------------------------------------------------ಯಾರವರು ಈ ರಾತ್ರಿಯಲಿ
ಬಿಡುವವರು ಬ್ಯಾಟರಿಯ ಬೆಳಕು
ಅವರ ಕಂಗಳಿಗೆ ಮೆತ್ತಿಕೊಂಡಿರಬೇಕು
ಕಾಣದ ಕೊಳಕು...