ಹನಿಗವನಗಳು
ಕವನ
ಅಮ್ಮ
ಅಚ್ಚುಕಟ್ಟಾಗಿದ್ದರೆ
ನಮ್ಮನೆ
ನಿಮ್ಮನೆ
ಅದಕ್ಕೆ ಕಾರಣ
ದಣಿವಿಲ್ಲದೆ ದುಡಿಯುವ
ಅಮ್ಮನೇ..!
ಸಂಬಂಧ
ನೆರೆಮನೆಯ ಸಂಬಂಧಗಳು
ಯಾಕೆ ಇಂದು
ಬಿರುಕು ಬಿಟ್ಟಿವೆ..?
ಮನೆಯ ಸುತ್ತಲೂ
ಕಲ್ಲುಗಳು ಎತ್ತರದ
ಗೋಡೆಯನ್ನು ಕಟ್ಟಿವೆ..!
ರಾಗಿ
ಅಕ್ಕಿಯೊಂದಿಗಿನ ಜಗಳದಲ್ಲಿ
ತನ್ನ ಗುಣದಿಂದಲೇ
ಗೆದ್ದಿದೆ ರಾಗಿ..!
ಅದರಂತೆ ಅಹಂನ್ನು ಬಿಟ್ಟು
ಅಂತಸತ್ವದಿಂದಲೇ
ಎಲ್ಲರ ಪ್ರೀತಿಗೆ ಭಾಜನರಾಗಿ..!
ಉಗುರು
ಬೆಳವಣಿಗೆಯನ್ನು
ಸಹಿಸದವರು
ಚಿವುಟಿ ಬಿಡುತ್ತಾರೆ ಚಿಗುರನ್ನು
ಆದರೂ ಮತ್ತೆ ಬೆಳೆಯಬೇಕು
ನೋಡಿ ಕಲಿಯಬೇಕು
ನಮ್ಮ ಬೆರಳ ಉಗುರನ್ನು..!
ಚಿತ್ರ್
