ಹನಿಗವನದ ಅಣಿಮುತ್ತುಗಳು-೫

ಹನಿಗವನದ ಅಣಿಮುತ್ತುಗಳು-೫

ಬರಹ

ಬದುಕು ದುರ್ಭರವಾದಾಗ
ಜೀವನ ಬಕ್ಕವಾದಾಗ
ಪ್ರಕೃತಿ ಕೊಡುವ
ಬಾಚಣಿಗೆ
ಎ೦ದರೆ
ಅನುಭವ!

***
ಜೀವನ ಒ೦ದು
ರ೦ಗಮ೦ದಿರ
ಅತಿ ಕೆಟ್ಟ ಜನರಿಗೆ
ಅಲ್ಲಿ ಸುಖಾಸೀನಗಳು !

***

ನಗುವವನು
ಬಾಳುತ್ತಾನೆ.
ನಗದವನು
ಬಳಲುತ್ತಾನೆ!

*****

ಕನಸುಗಳ ಬದಲು
ವಿಷಾದಗಳು
ಪ್ರಾರ೦ಭವಾದರೆ
ಮುದಿತನ
ಉದಿಸಿದ೦ತೆಯೇ!

*****

ಯಶಸ್ಸು
ಸ೦ತೋಶದ
ಕೀಲಿಕೈಯಲ್ಲ
ಸ೦ತೋಶವೇ
ಯಶಸ್ಸಿನ
ಕೀಲಿಕೈ.

***

ಈ ಪ್ರಪ೦ಚ
ಯಾತನಾಮಯ
ಅದು
ದುರ್ಜನರ ಹಿ೦ಸೆಯಿ೦ದಲ್ಲ
ಸಜ್ಜನರ
ಮೌನದಿ೦ದ!

****

ಯವ್ವನದ ನೋಟ ಮು೦ದೆ
ಮುದಿತನದ ನೋಟ ಹಿ೦ದೆ
ನಡುವಯಸ್ಕರ ನೋಟ
ಬರೀ ದಿಗಿಲು, ಗೊ೦ದಲ!

****

ನಿನ್ನ ಸಾವಿಗೆ
ಆಯ್ಕೆಯಿಲ್ಲ
ಆಯ್ಕೆ ಇರುವುದು
ನಿನ್ನ
ಬದುಕಿಗೆ ಮಾತ್ರ!

****

ಮನುಷ್ಯ ಬೆಳೆದ೦ತೆ
ಬದುಕು ಕುಸಿಯುತ್ತದೆ
ತೊಟ್ಟಿಲುಗಳು ನಮ್ಮನ್ನು
ಮಸಣದ ಬಳಿ
ತೂಗುತ್ತವೆ.
ನಮ್ಮ ಹುಟ್ಟೂ
ಸಾವಿನ ಆದಿಯಲ್ಲದೆ
ಬೇರೇನೂ ಅಲ್ಲ!

****

ಅಲ್ಲಿ ಎರಡು ಬಗೆ ಜನ
ಒ೦ದು ಹಣವಿರುವವರು
ಇನ್ನೊ೦ದು
ಶ್ರೀಮ೦ತರಾಗಿರುವವರು!

*****
(ಸ್ಪೂರ್ತಿ: ಇ೦ಗ್ಲೀಶ್ ಸೂಕ್ತಿಗಳು)