ಹನಿಗವನ- ಮನವೆಂದಿತು

ಹನಿಗವನ- ಮನವೆಂದಿತು

ಕವನ

ಸೀಮಾತೀತ ಓ ಮನಸೇ

ಅನುದಿನದಲ್ಲಿಹ ಕನಸೇ!

ಸೀಮೆ ಗೆ ಇಲ್ಲವಲ್ಲ ಗಡಿ

ಮನಸಿಗೆ ಎಲ್ಲುಂಟು ಮಡಿ.!?

 

ಭೂರಮೆ ಮಡಿಲಿಗೆ ಸೀಮಾರೇಖೆ

ತುತ್ತನಿತ್ತವಳಿಗೆ ಇದು ಬೇಕೇ?

ಬಾನಂಗಳಕು ಲಕ್ಷ್ಮಣ ರೇಖೆ.....

ಮೂರ್ದಿನ ಬಾಳಿಗೆ ಇದೇಕೆ !?

***

ಹೆಣ್ಣೆಂಬ ತೈಲ

ತ್ಯಾಗವೆಂಬ ತೈಲವು ಹಣತೆಯಲ್ಲಿ

ಬೆಳಕಿನ ತ್ಯಾಗವದು ಬತ್ತಿಯಲ್ಲಿ

ಮಣ್ಣು,ಎಣ್ಣೆ,ಬತ್ತಿಯು ಬೆಳಕಿನಲ್ಲಿ

ಧರಣಿಯ ಪ್ರತಿ ರೂಪ ಹೆಣ್ಣಿನಲ್ಲಿ.

 

ಹೆಣ್ಣು,ಹೊನ್ನು,ಮಣ್ಣು ಹಣೆಬರಹದಲ್ಲಿ

ಗೃಹದ ಕಣ್ಣು- ಹೆಣ್ಣು ತ್ಯಾಗದಲ್ಲಿ

ಬತ್ತಿಯಂತೆ ದಹಿಸುತ ಬಾಳಿನಲ್ಲಿ

ತೈಲದೊಡನೆ ತೇಲುತಾ ಬೆಳಕಿನಲ್ಲಿ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್

ಚಿತ್ರ್