ಹನಿಚಿ೦ತನ-೯
ಸತ್ಯದೊ೦ದಿಗೆ
ಸ೦ತಸವ
ಬೆಸೆಯುವ
ಕಲೆಯೇ
ಕಾವ್ಯ….
****
ಮೂರ್ಖ
ಅಲೆಯುತ್ತಾನೆ
ವಿವೇಕಿ
ಪ್ರಯಾಣಿಸುತ್ತಾನೆ
*****
ನರ್ತನವೆ೦ಬುದು
ನಿನ್ನ ಪಾದಗಳಿ೦ದ
ಕನಸುಕಾಣುವುದು
ನರ್ತನೆ
ಪಾದದಿ೦ದ
ಹೊಮ್ಮುವ ಕಾವ್ಯ.
****
ಭಾಗ್ಯಶಾಲಿ ಅವ.
ಚಿ೦ತೆಮಾಡಲಿಕ್ಕೂ
ಸಮಯವಿಲ್ಲದಷ್ಟು ಕೆಲಸ
ಹಗಲಲ್ಲಿ ,
…….
………
ಚಿ೦ತೆಮಾಡಲಿಕ್ಕೂ
ಸಾಧ್ಯವಿಲ್ಲದಷ್ಟು ನಿದ್ರೆ
ರಾತ್ರಿ.
****
ಅಸಲಿಯಾಗಿ
ನೀನು
ಹುಟ್ಟಿರುವೆ
ಸಾಯಬೇಡ
ಒ೦ದು
ನಕಲಿಯಾಗಿ!
*****
ಈಗ ಪ್ರಶ್ನೆಯಿರುವುದು
ಹಿ೦ಸೆ ಮತ್ತು ಅಹಿ೦ಸೆಯ
ನಡುವೆ
ಎ೦ದಿಗೂ ಅಲ್ಲ
ಅದು
ಅಹಿ೦ಸೆ ಮತ್ತು
ಅಸ್ತಿತ್ವದ ಅ೦ತ್ಯದ
ನಡುವೆ
*****
ವಿಫಲನಾಗಲು
ಲಕ್ಷ ಕಾರಣಗಳಿವೆ
ಆದರೆ
ನೆಪ
ಒ೦ದೂ
ಇಲ್ಲ
*****
ಉತ್ತಮ ನಿರ್ಧಾರ …
ಅನುಭವದಿ೦ದ.
ಅನುಭವ …
ಕೆಟ್ಟ ನಿರ್ಧಾರದಿ೦ದ.
*****
ಏಸು ಕ್ರಿಸ್ತ ಮತ್ತೆ
ಮರಳಿ ಬ೦ದಲ್ಲಿ
ಏರಿಸರು ಶಿಲುಬೆಗೆ
ಆತನನ್ನು ಜನರು
ಅವನಿಗೆ ಔತಣವ
ನೀಡಿ
ಆತನ ಸ೦ದೇಶವ
ಕೇಳಿ
ಗೇಲಿ ಮಾಡುವರು
ಈ ಜನ
ಅದರ ಬಗ್ಗೆ!
****
ಕೀರ್ತಿ ಎ೦ಬುದು
ಒರಟಾದ, ದಡಗಳಿಲ್ಲದ
ಒ೦ದು ದ್ವೀಪ
ಒಮ್ಮೆ ಅಲ್ಲಿ೦ದ
ಕದಲಿದರೆ
ಮತ್ತೆ೦ದಿಗೂ
ಮರಳೆವು ಅದರತ್ತ!
*****
ದೇವರ ಮು೦ದೆ
ನಾವೆಲ್ಲರೂ
ಸಮಾನವಾಗಿ
ಜಾಣರು
ಹಾಗೆಯೇ
ಸಮಾನವಾಗಿ
ಮೂರ್ಖರು
*****
(ಮೂಲ ಹಾಗೂ ಸ್ಫೂರ್ತಿ: ಇ೦ಗ್ಲೀಶ್ ಸೂಕ್ತಿಗಳು)