ಹನಿಯ ಸ್ಪರ್ಶ..
ಕವನ
ಮಳೆಯ ಹನಿ ನಿಧಾನವಾಗಿ
ಕಣ್ಣಿನ ಮೇಲೆ ಬಿತ್ತು
ಆಹಾ ಎಷ್ಟು ಸುಂದರ ಎನಿಸುತ್ತದೆ
ನಿನ್ನ ಆ ನಗುಮುಖ ಕಾಣಿಸಿತು
ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆ
ಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು
ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು
ಆಹಾ ಎಷ್ಟು ಚೆನ್ನಾಗಿ ಅನಿಸುತ್ತಿದೆ
ಎಷ್ಟು ಸುಂದರ ಹೂಗಳು ನಗುತಿವೆ
ಅವು ಖುಷಿಯಿಂದ ನನ್ನ ತುಟಿಗಳ ಹತ್ತಿರ ಬಂದಿವೆ
ನನಗೆ ನೀನು ಚುಂಬನ ನೀಡಿದ ಸ್ಪರ್ಶದ ಸುಖ ಸಿಗುತ್ತಿದೆ
ಈಗ ನೀನು ಹೇಳು ನಿನಗೆ ಹೇಗೆ ಅನಿಸುತ್ತಿದೆ !!
ನನಗೊತ್ತು ನಿನಗೆ ಬಹಳ ಸುಂದರ ಅನಿಸುತ್ತದೆ