ಹನಿ..... ಹನಿಗಳ ನಡುವೆ ಒಂದಷ್ಟು ಹೊತ್ತು

Submitted by Shreerama Diwana on Tue, 10/13/2020 - 09:19
ಬರಹ

೧. ಬಾನಿನ

     ಒಳಗಿನ

     ವಿಚಿತ್ರ

     ಗಳಿಗೆ

     ಬುವಿಯು

     ಸಾಕ್ಷಿಯಾಯಿತು ! 

 

೨. ಹಾಯ್ಕು

   ವಿಚಿತ್ರವಾದ

   ಆಚಾರಗಳಲ್ಲಿಯೂ

   ತಜ್ಞರಿದ್ದಾರೆ !

 

೩. ರುಬಾಯಿ

ಹೊಲಿದು ಬಿಡು ಹಳೆಯ ಸಂಗತಿಗಳ

ಹರಿದು ಒಗೆಯು ಕೆಟ್ಟ ಸಂಪ್ರದಾಯಗಳ

ಹೊಟ್ಟೆ ಉರಿಗಳ ಮೆಟ್ಟಿ ನಿಲ್ಲಬೇಕಿಂದು

ಬೆಳಗಿಸಬೇಕು ಹೊಸ ಸಂಸ್ಕಾರ ದೀಪಗಳ 

 

೪. ಮುತ್ತುಗಳ ನಡುವೆ

ಮುತ್ತುಗಳ ನಡುವೆಯೇ ನಡೆಯುತ್ತಿದ್ದರು ನಾವು

ತುತ್ತುಗಳ ಕೊಟ್ಟವರ ಮರೆಯಬಾರದು ಬಂಧು

ಚಿತ್ತಗಳ ಕೊಲ್ಲುತ ಸಾಗದಿದ್ದರೆ ಬುವಿಯಲಿ

ಸಂತೋಷ ಸಂಭ್ರಮದಿ ಬಾಳುವೆವು ಜೊತೆಯಲಿ

 

೫. ಒಡಪು

ಬಂಡೆಗಪ್ಪಳಿಸುವಂತೆ ಹೊಡೆಯುತ್ತಲಿಹಳು

ರಪ ರಪನೆ ಹಪ್ಪಳ ಸಂಡಿಗೆ ಮಾಡುತಿಹಳು

ಬೋಸ ನೀನೆಂದು ನನ್ನ ಹಂಗಿಸುತಿಹಳು

ಬಾಸು ನಿನಗೆ ನಾನೆಂದು ಸವಿ ಹೇಳುತಿಹಳು

 

೬. ಹನಿ ದ್ವಿಪದಿ

     ಕನಸೊಳಗೆಂದೂ

     ನನಸಿರಲಿ

 

೭. ಟಂಕಾ

ಹಡಿಯೊಳಗೆ

ನಾನಿರಲು ದಿನವೂ

ನಲ್ಲನವನು

ಬರುವನೈ ಕ್ಷಣವೂ

ಮುತ್ತ ಕೊಡುವೆನೆಂದು ! 

 

-ಹಾ ಮ ಸತೀಶ

 

ಚಿತ್ರ್