ಹರಸಮ್ಮ ಜಗನ್ಮಾತೆ

ಹರಸಮ್ಮ ಜಗನ್ಮಾತೆ

ಕವನ

ಕೈಲಾಸವಾಸನ ಪ್ರಿಯಪತ್ನಿ ಪಾರ್ವತಿ

ವ್ರತ ನಿಯಮ ನೇಮ ನಿಷ್ಠೆ ಯನು|

ಮಂಗಳಕರವಾದ ಮಹಾಭಾಗ್ಯದೊಳು

ಕಥೆಯ ಆಲಿಸಿ ಪುನೀತೆಯಾದಳು||

 

ಶ್ರಾವಣ ಶುಕ್ರವಾರದ ದಿನದಂದು

ಮಹಾಲಕ್ಷ್ಮೀ ವ್ರತವನ್ನು ಕೈಗೊಂಡು|

ಸೌಭಾಗ್ಯ ಸಂಪತ್ತು ನಿಶ್ಚಿತ ಪಲಗಳು

ಅಳಿಸುವವು ಜನ್ಮಾಂತರದ ಪಾಪಗಳು||

 

ಕುಂಡಿನ ಪಟ್ಟಣದ ಚಾರುಮತಿ ದೇವಿ

ಪರಮಪವಿತ್ರೆ ಮಧುರಭಾಷಿಣಿ ತಾಯಿ|

ಸಾಧ್ವಿಮಣಿ ಕಣ್ಮಣಿ ಗೌರವದ ಖನಿ

ನಿರ್ಮಲಚಿತ್ತದ ಪತಿವ್ರತೆ ಶಿರೋಮಣಿ||

 

ಪತಿಶಕ್ತಿ ಪರಾಯಣೆ ದೇವಿ ಕಲ್ಯಾಣಿ

ಸ್ವಪ್ನ ಮಾತುಗಳ ಆಚರಿಸಿ  ಸಂಭ್ರಮದಿ|

ಭಕ್ತಿಯಲಿ ಶಕ್ತಿಯಲಿ ಬೇಡುತಲಿ ವರವನ್ನು

ಲೋಕಕ್ಷೇಮವನು ನೀಡಿ ಹರಸಮ್ಮ ಜಗನ್ಮಾತೆ||

 

ತುಪ್ಪದ ಭಕ್ಷ್ಯ ಮಹಾನೀಲಾಂಜನ

ದಕ್ಷಿಣೆ ಬಾಗೀನ ಫಲತಾಂಬೂಲ|

ಧ್ಯಾನ ಆವಾಹನ ಪರಮಪಾವನ

ದೇವಿ ಸನ್ನಿಧಿಯಲ್ಲಿ ಗುಣಗಾನ||

 

ಧಾನ್ಯ ಆಭರಣ ಸಕಲ ಸಂಪತ್ತಿನಲಿ

ಬಂಧು ಬಾಂಧವರ ಸುಖ ಸಂತೋಷ|

ಪಾರ್ವತಿ ಪರಮೇಶ್ವರನ ಕೃಪಾದೃಷ್ಟಿ

ಆರೋಗ್ಯ ನೆಮ್ಮದಿ ಜೀವನದಿ ದೊರೆಯಿತು||

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು

 

ಚಿತ್ರ್