ಹರಿಣಾಕ್ಷಿಯ ನೃತ್ಯ ವೈಭವ

ಹರಿಣಾಕ್ಷಿಯ ನೃತ್ಯ ವೈಭವ

ಕವನ

ಜಿಂಕೆಯ ಕಣ್ಣಿನ ಚಂದದ ಮೊಗದಲಿ

ಕಂಕರಿ ವಾದ್ಯವು ಮೊಳಗುತಿದೆ

ಕಂಕಣ ಕಟ್ಟಿದ ತೋಳಲಿ ಮಿಂಚಿದೆ

ಕಿಂಕಿಣಿ ನಾದವು ಮಿಂಚುತಿದೆ..

 

ದೃಷ್ಠಿಯ ಬಟ್ಟದು ಕದಪಿನ ನಡುವೆಯೆ

ವೃಷ್ಠಿಯು ಚೆಲುವನು ಸುರಿಸಿರಲು

ಷಷ್ಠಿಯ ದಿನದಲಿ ನಾಟ್ಯದ ರಾಣಿಯು

ಮುಷ್ಠಿಯ ಹಿಡಿಯುತ ನಲಿತಿರಲು...

 

ಕಂಗಳ ನೋಟದಿ ವಿಸ್ಮಯ ವಿಷಯವು

ಚಂಗುನ ನುಡಿಸುತ ತೋರಿರಲು

ದಂಗಿನ ನೆರಳಲಿ ಚಿಗುರುವ ಮನವದು

ಚಂಗನೆ ಕುಣಿಯುತ ಮಿನುಗಿರಲು..

 

ತರತರ ಕನಸಿನ ಚಿತ್ರವು ಮೂಡಿದೆ

ಧರೆಯದು ತಣಿಯುವ ತೋಷದಲಿ

ಮರೆಯದ ನೆನಪಿನ ತೇರಲಿ ಬಂದಿದೆ

ಕರೆಯುತ ತಾಷೆಯ ನುಡಿಸುತಲಿ....

 

ತುರಬಲಿ ಮಲ್ಲಿಗೆ ಗಂಟದು ನಕ್ಕಿದೆ

ಥರಥರ ಕಸವರ ಹಾರವದು

ಹರಿಯುವ ಸಲಿಲವು ಶುದ್ಧದಿ ಹೊಳೆಯುತ

ವರದೆಯ ನೃತ್ಯದಿ ತೋರುವುದು..

 

ಹಣೆಯಲಿ ಪದಕವು ಸ್ಫುರಿಸಿದೆ ಗಳಿಸಿದೆ

ಕಣಜದಿ ರಾಶಿಯ ಸಿರಿಯಂತೆ

ಮಣೆಯನು ಹಾಕುತ ಚಿನ್ಮನ ಸೆಳೆದಿದೆ

ಚಣದಲಿ ಸೊಬಗದು ಗರಿಯಂತೆ...

 

ನಗುವಿನ ಮೊಗವದು ತನ್ಮಯ ರೂಪದಿ

ಜಗದಲಿ ಹೂಮಳೆ ಕರೆದಿರಲು

ಖಗಗಳ ಕಲರವ ತುಂಬಿದೆ ಬಾನಲಿ

ಪಗಿನದ ಸಿಂಚನ ಸೆಳೆದಿರಲು...

 

ಸತ್ಯದ ದಾರಿಲಿ ನಡೆಯುವ ಮನವದು

ಮಿಥ್ಯವ ಬಿಡುತಲಿ ಸಾಗಿರಲು

ಪಥ್ಯದಿ ಚಿಂತನ ಮಂಥನ ಜರುಗುತ

ನಿತ್ಯವು ಮಾನಿನಿ ಕುಣಿದಿರಲು....

 

ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್