ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಬಿಡುಗಡೆ
ಸಂಪದ ಪ್ರಾರಂಭಿಸಿದ ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ಹಂಸಾ ನಂದಿಯವರ 'ಹಂಸನಾದ' ಆಕೃತಿ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ೧೬.೦೭.೨೦೧೧ ರಂದು ಬಿಡುಗಡೆಯಾಯ್ತು .
ಈ ಪುಸ್ತಕ ಸಂಪದದವರೇ ಆದ ಹಂಸಾನಂದಿಯವರ ಕೃತಿ. ಜತೆಯಲ್ಲೇ ಮಂದಾರ ಸಂಸ್ಥೆಯ : "ಅಕ್ಟೋಬರ್ ೧೧" ಶ್ರೀಮತಿ ಪೂರ್ಣಿಮಾ ರಾಮ್ ಪ್ರಸಾದ್ ಅವರ ಕಥಾ ಸಂಕಲನ ಕೂಡಾ.
ಸಾರಂಗ ಮೀಡಿಯಾದ ಚೊಚ್ಚಲ ಕಾಣಿಕೆ ಶ್ರೀಯುತ ರಾಮ್ ಪ್ರಸಾದ್ ರವರ ಹಂಸನಾದದ ಬಿಡುಗಡೆಗೆ ಬೆಳಿಗ್ಗೆ ನಾನೂ ನನ್ನ ಶ್ರೀಮತಿ ಶಾಂತಿ ಬಸವನಗುಡಿಯ ಬಿ ಪಿ ವಾಡಿಯಾ ತಲುಪಿದಾಗ ನಮ್ಮನ್ನು ಸ್ವಾಗತಿಸಿದವರು ನಗು ಮುಖದಿಂದ ಸುಮಾ ನಾಡಿಗ್ ರವರು. ನಮ್ಮಲ್ಲಿ ( ಸಂಪದದಲ್ಲಿ) ಎಲ್ಲರೂ ಅವರನ್ನು ಹಂಸಾ ನಂದಿ ಎಂದೇ ಬಲ್ಲರು. ನಾನಂತೂ ಅವರನ್ನು ನೋಡಿ ನಮ್ಮ ರಾಘವೇಂದ್ರ ನಾವಡರ ಸಂಬಂಧೀ ಎಂತಲೇ ತಿಳಿದಿದ್ದೆ. ನಾಡಿಗರು ಅವರನ್ನು ರಾಮ್ ಪ್ರಸಾದ್ ಅಂತ ಪರಿಚಯಿಸಿದಾಗ, ನಾನು ಹಂಸಾ ನಂದಿಯವರೆಲ್ಲಿ ಅಂತಲೇ ಪ್ರಶ್ನಿಸಿದ್ದೆ.
ಸ್ವ್ಚಲ್ಪ ತಡವಾಗಿ ಆರಂಭವಾಗಿದ್ದ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು. ಚೊಚ್ಚಲ ಬಿಡುಗಡೆಯ ಕಾರ್ಯಕ್ರಮ ಸಮಯದಲ್ಲೂ ಸ್ವಲ್ಪ ಅದ್ಧೂರಿಯಾಗಿಯೇ ನಡೆಯಿತು. ಜೋಗಿ, ನಾಗೇಶ ಹೆಗ್ಗಡೆ, ಸುಪ್ರೀತ್, ಜಾನಕಮ್ಮ, ಹರೀಶ್ ಅತ್ರೇಯ, ಆತ್ರಾಡಿ ಸುರೇಶರು, ಮುಂತಾದವರನ್ನು ಭೇಟಿಯಾಗುವ ಸುಯೋಗ ದೊರಕಿತು.
ಕಾರ್ಯಕ್ರಮದ ಉದ್ಘಾಟನೆ ದೀಪಹಚ್ಚುವುದರ ಮೂಲಕ ಆರಂಭ ಮಾಡಿದರೆ ಸ್ವಾಗತ ಭಾಷಣ ಸುಧೀರ್ಘವಾಗಿಯೇ ಶ್ರೀಯುತ ರಾಮಚಂದ್ರ ಶರ್ಮ ತ್ಯಾಗಲಿಯವರು ಮುಂದುವರಿಸಿದರು, ಯಾಕೋ ಅವರು ಹಂಸನಾದವನ್ನು ಓದದೇ ಅದರ ಬಗೆಗೆ ಹೇಳಲು ಆರಂಭಿಸಿದ್ದು ಸರಿಕಾಣಲಿಲ್ಲ. ಎಲ್ಲವನ್ನೂ ಯೋಜನಾಬದ್ದವಾಗಿ ಮಾಡುವ ನಾಡಿಗರು ಮತ್ತು ಹಂಸಾನಂದಿಯವರು ಇದನ್ನು ಮರೆತದ್ದು ಹೇಗೆ ಅರ್ಥವಾಗಲಿಲ್ಲ, ಮೊದಲೇ ಹಂಸನಾದದ ಪ್ರತಿಯೊಂದನ್ನು ಅವರಿಗೆ ಕೊಟ್ಟಿರಬಹುದಿತ್ತು. ಆದರೂ ಪ್ರತಿ ಕ್ಷಣವನ್ನೂ ರಸವತ್ತಾಗಿ ವಿವರಿಸಿದರು ಅವರದ್ದೇ ವಿಷಯ ಅವರದ್ದೇ ವಿಶಿಷ್ಟ ಶೈಲಿಯಲ್ಲಿ.
ನಂತರ ಬಂದ ಶ್ರೀಮತಿ ವಿಜಯಾ ಹರನ್ ಅವರು ಹಂಸಾ ನಂದಿಯವರ ಪತ್ನಿ ಶ್ರೀಮತಿ ಪೂರ್ಣಿಮಾ ಅವರ ಅಕ್ಟೋಬರ್ ೧೦ ಕಥಾ ಸಂಕಲನ ಕಿರು ಪರಿಚಯ ಮಾಡಿಕೊಟ್ಟರು. ಕಥಾ ಸಂಕಲನದಲ್ಲಿದ್ದ ಹನ್ನೊಂದೂ ಕಥೆಯ ಪರಿಚಯ ಸೂಕ್ಷ್ಮವಾಗಿ ನಮ್ಮೆದುರು ತೆರೆದಿಟ್ಟರು. ಮೂಲತಃ ಅಭಿಯಂತರಾಗಿರುವ ಪೂರ್ಣಿಮಾರವರು ಬರೆದಿರುವ ಕಥೆಗಳಲ್ಲಿ ಸಾಮಾಜಿಕ ನ್ಯಾಯ, ಜೀವನ ಮೌಲ್ಯಗಳು ಹಾಸು ಹೊಕ್ಕಾಗಿವೆ ಎಂದರು.
ಶ್ರೀಮತಿ ಜಯಲಕ್ಶ್ಮೀ ಪಾಟಿಲ್ ಅವರು ಯುವ ಜೋಡಿ ಯಾದ ಶ್ರೀಯುತ ಹರಿ ಪ್ರಸಾದ್ ನಾಡಿಗರು ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಸುಮಾ ನಾಡಿಗ್ ರವರು ಹಾಗೂ ಶ್ರೀಯುತ ರಾಮ್ ಪ್ರಸಾದ್ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಪೂರ್ಣಿಮಾ ರವರು ಸಾಹಿತ್ಯ ಲೋಕದಲ್ಲಿ ಅವರ ಕಾರ್ಯ ಮತ್ತು ಸಫಲತೆಯ ಬಗ್ಗೆ ಸಭೆಗೆ ತಿಳಿಸಿದರು.
ಹಂಸಾನಂದಿಯವರು ತಮ್ಮದೇ ಶೈಲಿಯಲ್ಲಿ ಸಭೆಗೆ ತನ್ನ ಹಂಸ ನಾದದ ಹಲವು ಸುಭಾಷಿತ ಅನುವಾದವನ್ನು ಹಂಚಿಕೊಂಡರು.
ನಂತರ ಶ್ರೀಮತಿ ಪೂರ್ಣಿಮಾ ಅವರು ತಾನೇಕೆ ಲೇಖಕಿಯಾದೆ ಎಂಬುದನ್ನೂ ಹೇಳುತ್ತಾ ಕಥೆಗಳು ತನ್ನಲ್ಲಿ ಸೃಷ್ಟಿಯಾದ ಕಾರಣ /ಸನ್ನಿವೇಶಗಳನ್ನೂ ವಿವರಿಸಿದರು.
ನಿರೂಪಕಿ ದೀಪಾ ರವಿಶಂಕರ್ ಅವರು ಸೊಗಸಾಗಿ ಕಾರ್ಯ ಕ್ರಮವನ್ನು ಅಂದ ಗಾಣಿಸಿಕೊಟ್ಟರೆ ಅಡೂರು ಕೃಷ್ಣ ರಾವ್ ಅವರು ಹಂಸನಾದ ಸ್ಪರ್ದೆಯಲ್ಲಿ ವಿಜಯಿಯಾದವರ ಹೆಸರನ್ನು ಪ್ರಕಟಿಸಿ ಬಹುಮಾನ ಹಂಚಿದರು. ಶ್ರೀಮತಿ ಸುಮಾ ನಾಡಿಗ್ ರವರ ವಂದನಾರ್ಪಣೆಯೊಂದಿಗೆ ಈ ಅಂದದ ಕಾರ್ಯಕ್ರಮ ಮುಕ್ತಾಯಗೊಂಡಿತು.
ದೃಶ್ಯಾವಳಿಗಳು"
ಮುಖ್ಯ ಅತಿಥಿಗಳು ಮತ್ತು ಅವರ ಪರಿಚಯ, ಭಾಷಣ :
೧. http://youtu.be/P21YZ9Xv18E
೨. http://youtu.be/ZRZhjdMz6Gs
೩,http://youtu.be/N7StLUDtD_0
೪.http://youtu.be/-qcd5jzz7qM
Comments
ಉ: ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ...
ಉ: ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ...
ಉ: ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ...
ಉ: ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ...
ಉ: ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆಯ ಮೊದಲ ಪುಸ್ತಕ ...